ಧಾರವಾಡ: ನೂತನ ಗ್ರ್ಯಾಚ್ಯುಟಿ ಕಾನೂನಿನ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಗ್ರ್ಯಾಚ್ಯುಟಿ ಇನ್ಶುರೆನ್ಸ್ ಎನ್ನುವುದು ಯಾವ ಕಂಪೆನಿಯಲ್ಲಿ ಹತ್ತು ಜನಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೋ ಅವರು ಇದಕ್ಕೆ ಒಳಪಡುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಿಟ್ಟು ಎಲ್ಲಾ ಖಾಸಗಿ ಕಂಪೆನಿ ಕೆಲಸಗಾರರು ಇದಕ್ಕೆ ಒಳಪಡುತ್ತಾರೆ.
ಕಡ್ಡಾಯವಾಗಿ ಅವರು ಇನ್ಶುರೆನ್ಸ್ ಮಾಡಿಸಿಕೊಳ್ಳಬೇಕು ಎಂಬ ಕಾನೂನಿದೆ. ಕಂಪೆನಿ ಲಾಸ್ ಆದಾಗ ಗ್ರ್ಯಾಚ್ಯುಟಿ ಸಿಗುತ್ತಿರಲಿಲ್ಲ. ಕೆಲವರೊಂದು ಕಂಪೆನಿಗಳು ಕೆಲಸಗಾರರನ್ನು ಕೆಲಸದಿಂದ ತೆಗೆದಾಗ ಗ್ರ್ಯಾಚ್ಯುಟಿ ಸಿಗುತ್ತಿರಲಿಲ್ಲ. ಈಗ ಕಡ್ಡಾಯವಾಗಿ ಇನ್ಶುರೆನ್ಸ್ ತೆಗೆದುಕೊಳ್ಳುವುದರಿಂದ ಅವರಿಗೆ ನೇರವಾಗಿ ಇನ್ಶುರೆನ್ಸ್ ಕಂಪೆನಿಯಿಂದ ದುಡ್ಡು ಹೋಗುತ್ತದೆ ಎಂದರು.
ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು!,, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಗೀತೆ
ಇದಕ್ಕಾಗಿ ಹೊಸ ಕಾನೂನು ತಂದಿದ್ದೇವೆ. ಎಲ್ಲ ರೀತಿಯ ಇನ್ಶುರೆನ್ಸ್ ಕಂಪೆನಿಗಳು ಕಂಪೆನಿಯವರ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು. 60 ಲಕ್ಷ ಜನ ಈ ಕೆಲಸ ಮಾಡುತ್ತಿದ್ದಾರೆ. ಅವರನ್ನು ರಾತ್ರೋರಾತ್ರಿ ತೆಗೆದರೆ ಅವರಿಗೆ ಗ್ರ್ಯಾಚ್ಯುಟಿ ಸಿಗೋದಿಲ್ಲ. 5 ವರ್ಷದ ಮೇಲೆ ಗ್ರ್ಯಾಚ್ಯುಟಿ ಸಿಗಬೇಕು ಎಂದು ಕಾನೂನು ಇದೆ.
ಅದರಲ್ಲಿ ಕೆಲಸ ಬಿಟ್ಟ 15 ದಿನ ಸಂಬಳ ಹಾಕಿಕೊಡಬೇಕು ಎಂಬ ನಿಯಮವಿದೆ. ಈಗ ಎಲ್ಲರಿಗೂ ಗ್ರ್ಯಾಚ್ಯುಟಿ ಸಿಗಲಿದೆ. ಯಾರು ಬೇಗ ಕೆಲಸ ಬಿಟ್ಟಾಗ ಅವರ ಕುಟುಂಬಕ್ಕೆ ಈ ಲಾಭ ಆಗಲಿದೆ. ಕೇರಳ ಬಿಟ್ಟರೆ ನಮ್ಮ ರಾಜ್ಯದಲ್ಲೇ ಇದನ್ನು ಮಾಡಲಾಗಿದೆ. ಸಿಎಂ ಜೊತೆ ಚರ್ಚೆ ಮಾಡಿ ಅವರು ಸರಿ ಇದೆ ಅಂದಾಗಲೇ ಇದನ್ನು ಮಾಡಲಾಗಿದೆ. ಇದಕ್ಕೆ ಎಲ್ಲ ಅಧಿಕಾರಿಗಳು ಸಹಮತ ನೀಡಿದ ಮೇಲೆಯೇ ಇದನ್ನು ಜಾರಿಗೆ ತಂದಿದ್ದೇವೆ ಎಂದರು.