ಕಲಬುರಗಿ: ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಇವತ್ತು ಕಲಬುರಗಿಗೆ ಆಗಮಿಸಿದ ಹಿನ್ನಲೆ ಜನತೆಯಿಂದ ಭರ್ಜರಿ ಸ್ವಾಗತ ದೊರೆಯಿತು. ಮೈಸೂರು ರಾಜ್ಯ ಕರ್ನಾಟಕ ಅಂತ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವುದು ರಥಯಾತ್ರೆಯ ಮೂಲ ಉದ್ದೇಶ.
ಈ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಸರ್ದಾರ್ ಪಟೇಲ್ ವೃತ್ತದಲ್ಲಿ ಕಲಾತಂಡಗಳು ತಾಯಿ ಭುವನೇಶ್ವರಿ ದೇವಿಗೆ ಸ್ವಾಗತ ಕೋರಿದವು. ಇದೇವೇಳೆ ಜಿಲ್ಲಾ ಕಸಾಪ ಘಟಕದ ಮಹಿಳಾ ಸದಸ್ಯರು ಮೆರವಣಿಗೆ ವೇಳೆ ಸಕತ್ ಸ್ಪೆಪ್ಸ್ ಹಾಕಿದ್ದು ವಿಶೇಷವಾಗಿತ್ತು.