ಬೆಳಗಾವಿ:- ಮಾದಿಗರ ಆಸ್ಮಿತೆಗೆ ಧಕ್ಕೆ ಯಾಗದಂತೆ ತಿಮ್ಮಾಪೂರರವರಿಗೆ ಉಪ ಮಖ್ಯಮಂತ್ರಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ನೀಡಲು ಪಕ್ಷದ ಹೈಕಮಾಂಡಕ್ಕೆ ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪೂರರವರು ಉತ್ತರ ಕರ್ನಾಟಕದ ದಲಿತ ಸಮುದಾಯದ (ಎಡ ಗೈ ಪ್ರಬಲ ನಾಯಕರಾಗಿದ್ದು ಸಮುದಾಯವನ್ನು ಸಂಘಟಿಸಿ ಮಾದಿಗ ಸಮುದಾಯವನ್ನು ಒಟ್ಟು ಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿ ತನದಿಂದ ಬೆಂಬಲವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಸಮುದಾಯದ ಆಶಯವನ್ನು ಈಡೇರಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕೇಂದು ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಿರಪ್ಪ ಮ್ಯಾಗೇರಿ ಶ್ರೀಮತಿ ಇಂದಿರಾಗಾಂಧಿ ಹಾಗೂ ದೇವರಾಜ ಅರಸರ ಕಾಲದಿಂದಲೂ ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯವನ್ನು ನೀಡುತ್ತಾ ಬಂದಿದ್ದು ಇರುತ್ತದೆ ಈಗ ಸರ್ಕಾರ ಪಕ್ಷದ ಹೈಕಮಾಂಡರ ಮಾದಿಗರ ಅಸ್ಮಿತೆಗೆ ಧಕ್ಕೆ ಯಾಗದಂತೆ ಸಾಮಾಜಿಕ ನೀಡಬೇಕೆಂದು ಅವರು ಹೇಳಿದ್ದಾರೆ.
ಎಡಗೈ ಸಮುದಾಯದ ನಾಯಕರಾದಂತ ತಿಮ್ಮಾಪೂರರವರು ಹಾಗೂ ಕೆ.ಎಚ್.ಮುನಿಯಪ್ಪರವರು ಇದ್ದು ಕಾಂಗ್ರೇಸ ಪಕ್ಷವನ್ನು ಬೆಂಬಲಿಸುವಲ್ಲಿ ಸಮುದಾಯ ರಾಜ್ಯದಲ್ಲಿ ಪಕ್ಷದ ಬೆನ್ನೆಲಬು ಆಗಿ ನಿಂತಿದ್ದು ಇರುತ್ತದೆ. ಈಗ ಮತ್ತೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸಮಾಜದ ಬೆಂಬಲ ಪಡೆಯಬೇಕಾದರೆ ಉತ್ತರ ಕರ್ನಾಟಕ ಭಾಗದ ಸಮುದಾಯದ ನಾಯಕರಾದ ಶ್ರೀ ಆರ್.ಬಿ.ತಿಮ್ಮಾಪೂರವರವರನ್ನು ಡಿ.ಸಿ.ಎಮ್. ಹುದ್ದೆ ನೀಡಬೇಕೆಂದು ಅವರು ಹೇಳಿದ್ದಾರೆ.