ಬೆಂಗಳೂರು :- ಸ್ವಾಮಿ ವಿವೇಕಾನಂದರು ನಮ್ಮವರಲ್ಲ, ಅವರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದದ ಮೂಲಕ ಸುದ್ದಿಯಲ್ಲಿ ಇದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಇಂದು ವಿವೇಕಾನಂದರ ಜನ್ಮದಿನ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಮತ್ತು ಜಾತಿ ವ್ಯವಸ್ಥೆಯನ್ನು ಸರ್ಮರ್ಥಿಸಿದರು. ಅವರು ಬರೆಯುತ್ತಾರೆ, ‘ಜಾತಿ ಒಳ್ಳೆಯದು, ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಏಕೆಂದರೆ, ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ವಿವೇಕಾನಂದರು ಸಮಾನತಾವಾದಿಯಲ್ಲ.. ಅವರು ನಮ್ಮವರಲ್ಲ’ ಎಂದು ತಮ್ಮ ಟ್ವೀಟ್ನಲ್ಲಿ ಚೇತನ್ ಬರೆದುಕೊಂಡಿದ್ದಾರೆ.
ಹಿಂದುತ್ವ (ಬಿಜೆಪಿ) ಮತ್ತು ಉದಾರವಾದಿಗಳು (ಕಾಂಗ್ರೆಸ್) ಇಬ್ಬರಿಗೂ ಏಕ ಶತ್ರುವಿದೆ -ಸಮಾನತಾವಾದಿಗಳಾದ ನಮಗೆ ಸಂಪೂರ್ಣ ಅನ್ಯಾಯದ ವ್ಯವಸ್ಥೆಯೇ ನಮ್ಮ ಶತ್ರು. ಅದಕ್ಕೆ, ನಾವು ಸಮಾನತಾವಾದಿಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಎಷ್ಟೇ ಪ್ರಶ್ನಿಸಿದರೂ ಹಿಂದುತ್ವಕ್ಕೆ ತೃಪ್ತಿಯಾಗುವುದಿಲ್ಲ; ನಾವು ಸಮಾನತಾವಾದಿಗಳು ಬಿಜೆಪಿ ಮತ್ತು ಮೋದಿಯನ್ನು ಎಷ್ಟೇ ಪ್ರಶ್ನಿಸಿದರೂ ಉದಾರವಾದಿಗಳಿಗೆ ತೃಪ್ತಿಯಾಗುವುದಿಲ್ಲ. ಅವರಿಬ್ಬರೂ ಸೀಮಿತ ಚಿಂತಕರು; ನಾವು ಹಾಗೆ ಇರಬಾರದು.
ನಾವು ಸಮಾನತಾವಾದಿಗಳು ನಮ್ಮ ಐಕಾನ್ಗಳ (ಪೆರಿಯಾರ್, ಬಾಬಾಸಾಹೇಬ್) ಕ್ರಾಂತಿಕಾರಿ ಪರಿವರ್ತನೆಗೂ ಮತ್ತು ಅಸಮಾನತೆ/ಅನ್ಯಾಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಹಿಂದೂ ಸುಧಾರಣಾವಾದಿ ಉದಾರವಾದಿಗಳ ನಡುವೆ ವ್ಯತ್ಯಾಸವನ್ನು ಮಾಡಬೇಕು. ಹಿಂದೂ ಉದಾರವಾದಿಗಳು (ವಿವೇಕಾನಂದ, ಗಾಂಧಿ, ಇತ್ಯಾದಿ) ಹಿಂದುತ್ವಕ್ಕಿಂತ (ಸಾವರ್ಕರ್ ಮತ್ತು RSS) ಹೆಚ್ಚು ಅಪಾಯಕಾರಿ — ಇದಕ್ಕೆ ಕಾರಣ ಹಿಂದುತ್ವವು ಪ್ರಾಮಾಣಿಕ ಶತ್ರು; ಆದರೆ ಹಿಂದೂ ಉದಾರವಾದಿಗಳು ಅಪ್ರಾಮಾಣಿಕ/ಕುತಂತ್ರವಾದಿ ‘ಸ್ನೇಹಿತರು’
19 ನೇ ಶತಮಾನ:
ಸಮಾನತಾವಾದಿ ಜ್ಯೋತಿಬಾ ಫುಲೆ ಅವರು (ಮಹಾರಾಷ್ಟ್ರದಲ್ಲಿ) ಮಹಿಳೆಯರಿಗೆ ಮತ್ತು ದಲಿತರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದರು – ಇದು ಹಲವಾರು ಪ್ರಮುಖ ಮಹಿಳಾ ಸ್ತ್ರೀವಾದಿಗಳಿಗೆ ಸ್ಫೂರ್ತಿ ನೀಡಿತು
ಹಿಂದೂ ಉದಾರವಾದಿ ವಿವೇಕಾನಂದರು (ಬಂಗಾಳದಲ್ಲಿ) ಮಹಿಳೆಯರನ್ನು ‘ಗಂಡಸ್ತನ ಕಡಿಮೆಮಾಡುವ ಪ್ರಭಾವ’ ಎಂದು ನೋಡಿದರು – ಮಹಿಳೆ ‘ನಿಷ್ಠೆ’ ಅಥವಾ ‘ಪರಿಶುದ್ಧತೆಯ’ ಸಂದರ್ಭದಲ್ಲಿ ಮಾತ್ರ ‘ವೀರ’ ಆಗಿರಬಹುದು.
ಇಂದು ನಾವು ಫುಲೆಯವರಂತೆ ಇಂಟರ್ಸೆಕ್ಷನಲ್ ಸ್ತ್ರೀವಾದಿಗಳಾಗಿರಬೇಕು — ವಿವೇಕಾನಂದರಂತೆ ಪುರುಷಪ್ರಧಾನದವರಲ್ಲ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.