ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಆದರೆ ಆಲೂಗಡ್ಡೆಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಒಳ್ಳೆಯದಂತೆ.
ಆಲೂಗಡ್ಡೆ 2 ಪ್ರತಿಶತದಷ್ಟು ಸಕ್ಕರೆಯಂಶವನ್ನು ಹೊಂದಿರುತ್ತದೆ. ಅಲ್ಲದೇ ಆಲೂಗಡ್ಡೆಯನ್ನು ಹೆಚ್ಚಾಗಿ ಬೇಯಿಸಿ ತಿನ್ನುತ್ತಾರೆ. ಆದರೆ ಆಲೂಗಡ್ಡೆಯನ್ನು ಬೇಯಿಸಿದಾಗ ಅದರ ಸಿಪ್ಪೆ ಕರಗುತ್ತದೆ. ಆದರೆ ಅದರಲ್ಲಿರುವ ಸಕ್ಕರೆಯ ಪ್ರಮಾಣ ಹಾಗೇ ಇರುತ್ತದೆ. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ಆಲೂಗಡ್ಡೆಯನ್ನು ಬೇಯಿಸಿ ತಿನ್ನಬೇಡಿ.
ಹಾಗೇ ಕೆಲವರು ಆಲೂಗಡ್ಡೆಯನ್ನು ಹುರಿದು ತಿನ್ನುತ್ತಾರೆ. ಆದರೆ ಇದನ್ನು ಹುರಿಯುವುದರಿಂದ ಇದರಲ್ಲಿರುವ ಸಕ್ಕರೆಯಂಶ ಕರಗಿ ಹೋಗುತ್ತದೆ. ಇದನ್ನು ಮಧುಮೇಹಿಗಳು ಸೇವಿಸಬಹುದು. ಆದರೆ ಎಣ್ಣೆ ಮತ್ತು ಉಪ್ಪು ಅತಿಯಾಗಿ ಸೇರಿಸಿದ ಆಲೂಗಡ್ಡೆಯನ್ನು ಸೇವಿಸಿದರೆ ಕೊಲೆಸ್ಟ್ರಾಲ್, ಬಿಪಿಯಂತಹ ಸಮಸ್ಯೆಗಳು ಕಾಡುತ್ತದೆಯಂತೆ