ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಗೆ ಬಲಿಯಾಗುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ. ನೀವು ಆರೋಗ್ಯಕರ ಆಹಾರವನ್ನು ಸೇವಿಸಿ. ಇದು ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಹಣ್ಣುಗಳು, ತರಕಾರಿಗಳು, ವಾಲ್ ನಟ್ಸ್, ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ.
ಪ್ರತಿದಿನ ವ್ಯಾಯಾಮ ಮಾಡುವುದರಿಂದ ನೀವು ಜೀವಮಾನವಿಡೀ ಆರೋಗ್ಯವಾಗಿರಬಹುದು. ನೀವು ಪ್ರತಿದಿನ ಬೆಳಿಗ್ಗೆ ಸಾಧ್ಯವಾಗದಿದ್ದರೂ ಸಮಯ ಸಿಕ್ಕಾಗ ವ್ಯಾಯಾಮ ಮಾಡಿ. ಇದು ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ.
ನೀವು ಯಾವುದೇ ಕಾರಣಕ್ಕೂ ತಂಬಾಕನ್ನು ಬಳಸಬೇಡಿ. ಇದು ಕ್ಯಾನ್ಸರ್ ಮೂಲ ಕಾರಣವಾಗಿದೆ. ಇದರಿಂದ ಸಾವನಪ್ಪುವುದು ಖಚಿತ.
ನೀವು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ. ಇದನ್ನು ಅತಿಯಾಗಿ ಸೇವಿಸಿದರೆ ಕ್ಯಾನ್ಸರ್ ನ ಅಪಾಯ ಹೆಚ್ಚಾಗುತ್ತದೆ. ಇದು ಲಿವರ್ ಹಾನಿಗೆ ಕಾರಣವಾಗುತ್ತದೆ.
ಸೂರ್ಯನ ಹಾನಿಕಾರಕ ಕಿರಣಗಳಿಗೆ ನಿಮ್ಮ ದೇಹವನ್ನು ಒಡ್ಡಿಕೊಳ್ಳಬೇಡಿ. ಅದಕ್ಕಾಗಿ ಸನ್ ಸ್ಕ್ರೀನ್ ಗಳನ್ನು ಹಚ್ಚಿಕೊಳ್ಳಿ.
ವಯಸ್ಸಾದಂತೆ ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.