ಶಿವಮೊಗ್ಗ: ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯುವನಿಧಿಗೆ (Yuvanidhi) ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ. ನಿಮ್ಮೆಲ್ಲರ ಎದುರಿನಲ್ಲಿ ಯುವನಿಧಿಗೆ ಚಾಲನೆ ಕೊಡ್ತಿದ್ದೇವೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು.
ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ಮಭಾಗ್ಯ, ಯುವನಿಧಿ ಎಲ್ಲಾ ಭರವಸೆ ನೀಡಿದ್ದೆವು ಎಂದು ಹೇಳಿದರು. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆಹಾರ ಪದಾರ್ಥ ಬೆಲೆ ಗಗನಕ್ಕೇರಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಬೇಕು. ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಸಾಗಿಸೋದು ಕಷ್ಟವಾಗುತ್ತದೆ. ಅನೇಕ ಭರವಸೆ ಕೊಟ್ಟಿದ್ದೆವು. ಐದು ಗ್ಯಾರಂಟಿ ಜಾರಿಗೆ ತಂದೇ ತರುತ್ತೇವೆ ಎಂದಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಬಹಳ ಜನ ಯುವನಿಧಿ ಏಕೆ ಜಾರಿಗೆ ತಂದಿಲ್ಲ ಅಂತಿದ್ದರು.
Gmail Accounts: ಜಿ-ಮೇಲ್ ಖಾತೆ ಹೊಂದಿದ್ದು ಬಳಸುತ್ತಿಲ್ಲವೆಂದರೆ ಈ ಸ್ಟೋರಿ ಓದಲೇಬೇಕು: ಶಾಕಿಂಗ್ ನ್ಯೂಸ್!
ನಿರುದ್ಯೋಗಿ ಭತ್ಯೆ ಕೊಡುವ ಭರವಸೆ ನೀಡಿದ್ದೆವು. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆ ಭರವಸೆ ಕೊಟ್ಟಿದ್ದೆವು. ಸಮಾಜದಲ್ಲಿ 100ಕ್ಕೆ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕೊಟ್ಟಿದ್ದು ನಮ್ಮ ಸರ್ಕಾರ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬ ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.