ಬೆಂಗಳೂರು: ಹಾವೇರಿಯ ನಡೆದ ನೈತಿಕ ಪೊಲೀಸ್ಗಿರಿ ಬಗ್ಗೆ ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ ನಡೆದಾಗ ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿ ಪ್ರಕರಣದ ಕುರಿತು ಸಿಎಂ ಮಾತನಾಡುತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೆ (Sexual Assault) ಒಳಗಾದವಳು ಅಲ್ಪಸಂಖ್ಯಾತ ಮಹಿಳೆ ಅವಳಿಗೂ ರಕ್ಷಣೆ ನೀಡದೇ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.
Gmail Accounts: ಜಿ-ಮೇಲ್ ಖಾತೆ ಹೊಂದಿದ್ದು ಬಳಸುತ್ತಿಲ್ಲವೆಂದರೆ ಈ ಸ್ಟೋರಿ ಓದಲೇಬೇಕು: ಶಾಕಿಂಗ್ ನ್ಯೂಸ್!
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆರಂಭದಲ್ಲಿ ಪೊಲೀಸರು ಅದನ್ನು ತಳ್ಳಿ ಹಾಕುವ ಪ್ರಯತ್ನ ನಡೆಸಿದರು. ಆರೋಪಿಗಳಿಗೆ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದರು. ಯುವತಿ ಧೈರ್ಯವಾಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ, ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಚಾಂಪಿಯನ್. ಇಲ್ಲಿ ಅಲ್ಪಸಂಖ್ಯಾತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.