ರಾಯಚೂರು : ಜಾಹಿರಾತು ಕೊಟ್ಟ ತಕ್ಷಣ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದೆ ಅಂತ ಅಲ್ಲಾ. ಅಭಿವೃದ್ಧಿ, ಬರಗಾಲ ವಿಚಾರದಲ್ಲಿ ಕಾಂಗ್ರೆಸ್ನವರು ಈಗಾಗಲೇ ಆತಂಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ರಾಯಚೂರಿನ ದೇವದುರ್ಗದ ತಿಂಥಿಣಿ ಬ್ರಿಡ್ಜ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿ,
ಕಾಂಗ್ರೇಸ್ ಪಕ್ಷ ಜಾಹಿರಾತು ಕೊಟ್ಟ ತಕ್ಷಣ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿದೆ ಅಂತ ಅಲ್ಲಾ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಜನರು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ನವರು ಈಗಾಗಲೇ ಆತಂಕದಲ್ಲಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಪರವಾದ ಅಲೆ ರಾಜ್ಯ ಹಾಗೂ ದೇಶದಲ್ಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರು ಗೊಂದಲದಲ್ಲಿದ್ದಾರೆ.
ಒಂದು ಕಡೆ ಮೂರು ಜನ ಡಿಸಿಎಂ ಮಾಡಬೇಕು ಅಂತ ಧ್ವನಿ ಎತ್ತುತ್ತಾರೆ, ಮತ್ತೊಂದು ಕಡೆ ರಾಮಮಂದಿರ ವಿಚಾರದಲ್ಲಿ ಕಾಂಗ್ರಸ್ ಪಕ್ಷ ಹಾಗೂ ನಾಯಕರ ನಡವಳಿಕೆ ಹೇಗಿದೆ ಅಂದ್ರೆ. ಎಲ್ಲೊ ಒಂದು ಕಡೆ ಬರೀ ಅಲ್ಪಸಂಖ್ಯಾತರ ತುಷ್ಟಿಕರಣ ಮುಂದುವರೆಸಿಕೊಂಡು ಹೊರಟಿದ್ದಾರೆ. ಎಲ್ಲವನ್ನೂ ಜನ ಮತದಾರರು ಗಮನಿಸುತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನ ನೀಡುತ್ತಾರೆ. ಜಾಹಿರಾತು ಕೊಟ್ಟ ತಕ್ಷಣ ನುಡಿದಂತೆ ನಡೆದಿದ್ದಾರೆ ಅಂದ್ರ ಜನ ನಂಬುವುದಿಲ್ಲ. ಕಾಂಗ್ರೆಸ್ ನವರದ್ದು ಕೇವಲ ಪಬ್ಲಿಸಿಟಿ ಗಿಮಿಕ್.
Gmail Accounts: ಜಿ-ಮೇಲ್ ಖಾತೆ ಹೊಂದಿದ್ದು ಬಳಸುತ್ತಿಲ್ಲವೆಂದರೆ ಈ ಸ್ಟೋರಿ ಓದಲೇಬೇಕು: ಶಾಕಿಂಗ್ ನ್ಯೂಸ್!
ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಅಂತ ಜನ ಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಬರಗಾಲ ವಿಚಾರದಲ್ಲಿ ಸರ್ಕಾರ ನಡುವಳಿಕೆ ಸರಿಯಿಲ್ಲ. 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಲ್ಲೂ 3 ಫೇಸ್ ವಿದ್ಯುತ್ 7 ಗಂಟೆ ಕೊಡಲು ಆಗಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜನ ವಿರೋಧಿ, ಬಡವಿರೋಧಿ ಸರ್ಕಾರ ಅಂತ ಜನ ನಿರ್ಧರಿಸಿದ್ದಾರೆ. ದಲಿತ ವಿರೋಧಿ ಸರ್ಕಾರ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.