ಪೊಲೀಸರ ವಿಚಾರಣೆ ಎದುರಿಸಿದ ಮಾತನಾಡಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಟೇರ ಸಿನಿಮಾ ಯಶಸ್ಸು ಹಿನ್ನೆಲೆಯಲ್ಲಿ ಜನವರಿ 3ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಊಟ ಮಾಡಿಕೊಂಡು ಸ್ಥಳದಿಂದ ನಿರ್ಗಮಿಸಿದ್ದೇವೆ. ಊಟ ಮಾಡುವುದು ಪೂರ್ವ ನಿರ್ಧರಿತವಾಗಿರಲಿಲ್ಲ.
ಊಟ ಮಾಡೋದು ತಡವಾಯಿತು. ಈ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದ್ರು. ಇನ್ನು ಕಾಟೇರ ಸಿನಿಮಾ ಯಶಸ್ಸು ತಡೆಯಲಾರದೆ ದರ್ಶನ್ ನನ್ನ ಟಾರ್ಗೆಟ್ ಮಾಡಿಕೊಳ್ಳಲಾಗುತ್ತಿದೆ. ವಿನಾಕಾರಣ ಅವರ ಹೆಸರು ತಳುಕು ಹಾಕುತ್ತಿದ್ದಾರೆ.ಇದನ್ನೆಲ್ಲಾ ಯಾರು ಮಾಡುತ್ತರಂದು ಗೊತ್ತಿಲ್ಲ ಆದ್ರೆ ದಯವಿಟ್ಟು ಇಲ್ಲಿಗೆ ನಿಲ್ಲಿಸಿ ಎಂದು ಅಸಮಧಾನ ವ್ಯಕ್ತಪಡಿಸಿದ್ರು.
ಇನ್ನು ದರ್ಶನ್ ಹಾಗು ನಟರು ಪೊಲೀಸ್ ಠಾಣೆಗೆ ಬರ್ತಾರೆ ಎಂದು ಗೊತ್ತಾಗಿದ್ರಿಂದ . ಠಾಣೆ ಬಳಿ ಸಾವಿರಾರು ಜನ ಅಭಿಮಾನಿಗಳು ಜಮಾಯಿಸಿ ದರ್ಶನ್ ಗೆ ಜೈಕಾರ ಹಾಕಿದ್ರು. ಇನ್ನು ಪ್ರಕರಣದ ಬಗ್ಗೆ ಏನೂ ಮಾತನಾಡದ ದರ್ಶನ್ ಚಿಕ್ಕಣ ಅವರ ಚಿತ್ರ ಬರ್ತಿದೆ ಸಪೋರ್ಟ್ ಮಾಡಿ ಎಂದಷ್ಟೇ ಹೇಳಿದ್ರು. ಒಟ್ಟಿನಲ್ಲಿ ದರ್ಶನ್ ಗೆ ಸಕ್ಸಸ್ ನ ಹಿಂದೆ ಸಮಸ್ಯೆಗಳು ಬೆನ್ನತ್ತುವುದು ಸಾಮಾನ್ಯವಾಗಿ ಬಿಟ್ಟಿದೆ… ಇನ್ನು ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೆ ಅಮತ ಕಾದುನೋಡಬೇಕಿದೆ..