ಬೆಂಗಳೂರು: ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ನಟ ದರ್ಶನ್ ಪೋಲೀಸ್ ಸ್ಟೇಷನ್ ಮೆಟ್ಟಿಲೇರೋ ಸ್ಥಿತಿ ಬಂದಿದೆ. ಜೆಟ್ ಲಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಕಾಟೇರ ಟೀಂ ಕಾನೂನು ಉಲಂಘನೆ ಮಾಡಿದ್ರು.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇವತ್ತು ಏನೆಲ್ಲಾ ಬೆಳವಣಿಗೆ ಆಯ್ತು ಪೊಲೀಸ್ ಠಾಣೆಗೆ ಯಾರೆಲ್ಲ ಬಂದಿದ್ರು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ತೋರಿಸ್ತೀವಿ ನೋಡಿ. ಅದ್ಯಾಕೋ ಏನೋ ದರ್ಶನ್ಗೆ ಒಂದು ಯಶಸ್ಸು ಸಿಗುತ್ತಿದ್ದಂತೆ ಮತ್ತೊಂದು ಕಾಂಟ್ರವರ್ಸಿಯಲ್ಲಿ ತಗಲಾಕಿಕೊಳ್ತಾನೆ ಇರ್ತಾರೆ.
ಎಲ್ಲಾ ಸಮಸ್ಯೆಗಳು ಬಗೆಹರಿದು ಕಾಟೇರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಯಡವಟ್ಟು ಮಾಡಿಕೊಂಡ ದರ್ಶನ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದ್ಬಿಡ್ತು. ಜನವರಿ 3 ರಂದು ಕಾಟೇರ ಸಕ್ಸಸ್ ಮೀಟ್ ಆದ ಮೇಲೆ ಜೆಟ್ ಲಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದಕ್ಕೆ ಸುಬ್ರಮಣ್ಯನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ರು. ಪಬ್ ಮಾಲೀಕರ ಮೇಲೆ ಎಫ್ ಐ ಆರ್ ಹಾಕಿದ್ದ ಪೊಲೀಸರು ಅಂದು ಅವಧಿ ಮೀರಿದ ಪಾರ್ಟಿಯಲ್ಲಿ ಭಾಗವಹಿಸಿದ್ದ ದರ್ಶನ್ , ರಾಕ್ ಲೈನ್ ವೆಂಕಟೇಶ್,ಅಭಿಶೇಕ್ ಅಂಬ್ರೀಷ್ , ತರುಣ್ ಸುಧೀರ್ , ಡಾಲಿ ಧನಂಜಯ್ ಸೇರಿ ಕಾಟೇರ ಚಿತ್ರತಂಡ 8 ಜನರಿಗೆ ನೋಟೀಸ್ ಕೊಟ್ಟಿದ್ರು..
Bigg News: ತಡರಾತ್ರಿ ಪಾರ್ಟಿ ಮಾಡಿದ ಆರೋಪ : ಪೊಲೀಸ್ ಠಾಣೆಗೆ ಹಾಜರಾದ ನಟರು: Video
ಪೊಲೀಸರು ಕೊಟ್ಟಿದ್ದ ನೋಟೀಸ್ ಗೆ ಎಲ್ಲರೂ 8 ನೇ ತಾರೀಕಿಗೆ ಬಂದು ಸ್ಟೇಟ್ ಮೆಂಟ್ ಕೊಡಬೇಕಿತ್ತು. ಆದ್ರೆ ಎಲ್ಲರೂ ಹೊರದೇಶದಲ್ಲಿದ್ದಿದ್ದರಿಂದ. ನಟರಾದ ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಇಂದು 3-30 ಕ್ಕೆ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ರು… ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ ಪೊಲೀಸರು ಪ್ರತಿಯೊಬ್ಬರ ಬಳಿಯೋ ಪ್ರತ್ಯೇಕವಾಗಿ ಹೇಳಿಕೆ ದಾಖಲಿಸಿಕೊಂಡು ಕಳಿಸಿದ್ರು…