ಮಂಡ್ಯ : ಚಲಿಸುತ್ತಿದ್ದ ಬೈಕ್ ಮೇಲೆಯೇ ಹೈ ಟೆನ್ಷನ್ ವಿದ್ಯುತ್ ಕಂಬ ಉರುಳಿಬಿದ್ದ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
Bigg News: ತಡರಾತ್ರಿ ಪಾರ್ಟಿ ಮಾಡಿದ ಆರೋಪ : ಪೊಲೀಸ್ ಠಾಣೆಗೆ ಹಾಜರಾದ ನಟರು: Video
ಮಂಡ್ಯದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಗಂಜಂ ನಿವಾಸಿ ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ವಿಸ್ ರಸ್ತೆಗೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿದ್ಯುತ್ ಕಂಬದಲ್ಲಿ ಕ್ಲಾಂಪ್ ಕಳ್ಳತನ ಹಿನ್ನೆಲೆ ರಸ್ತೆಗೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ.