ಬೆಂಗಳೂರು: ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಕೆಲವರ ಬಂಧನವಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ನೈತಿಕ ಪೊಲೀಸ್ಗಿರಿ ವಿಚಾರವಾಗಿ ಸಂತ್ರಸ್ತೆಯಿಂದ ಗ್ಯಾಂಗ್ ರೇಪ್ ಆರೋಪ ವಿಚಾರವಾಗಿ ಮಾತನಾಡಿ, ಈ ವೇಳೆ ಅವರು ಹಾವೇರಿ ಕೇಸ್ ತನಿಖೆ ನಡೆಯುತ್ತಿದೆ. ಮೊದಲು ಆಕೆ ಗ್ಯಾಂಗ್ ರೇಪ್ ಎಂದು ದೂರು ಕೊಟ್ಟಿರಲಿಲ್ಲ. ನಂತರ ಆಕೆ ರೇಪ್ ಎಂದು ದೂರು ಕೊಟ್ಟಿದ್ದಾರೆ.
ಈಗಾಗಲೇ ಪ್ರಕರಣದಲ್ಲಿ ಹಲವರ ಬಂಧನ ಅಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡೋ ಕೆಲಸ ಮಾಡುವುದಿಲ್ಲ. ಈ ಪ್ರಕರಣವನ್ನು ಲೈಟ್ ಆಗಿ ತೆಗೆದುಕೊಂಡು ಬಿ ರಿಪೋರ್ಟ್ ಹಾಕೋಕು ಬಿಡುವುದಿಲ್ಲ. ರೇಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿದೆ. ಅಲ್ಲದೇ ಟೆಸ್ಟ್ ಮಾಡುವುದು ಸೇರಿದಂತೆ ಹಲವು ಪ್ರಕ್ರಿಯೆ ಇದೆ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.