ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್ (Darshan) ಅಭಿಮಾನಿಗಳು ಪೋಸ್ಟ್ ಮಾಡಿದ್ದರು. ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಇದೀಗ ಅದೇ ಅಭಿಮಾನಿಗಳು ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದು, ರಿಲೀಸ್ ಆಗಿ ಎರಡೇ ವಾರಕ್ಕೆ ಕಾಟೇರ ಸಿನಿಮಾ ಮತ್ತಷ್ಟು ಬಾಕ್ಸ್ ಆಫೀಸ್ ತುಂಬಿಸಿದೆ. ಬರೋಬ್ಬರಿ 157.42 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಕಾಟೇರ ಚಿತ್ರ ಮೊದಲ ವಾರದಲ್ಲಿ 406 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ಬಿಡುಗಡೆ ಯಾಗಿತ್ತು. 2 ನೇ ವಾರದಲ್ಲಿ462 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿತ್ತು. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟು 416 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿದೆ.
ಮೊನ್ನೆಯಷ್ಟೇ ಕಾಟೇರ (Katera) ಸಿನಿಮಾದ ಶೋ ದುಬೈನಲ್ಲಿ ನಡೆದಿದೆ. ದುಬೈನಲ್ಲೂ (Dubai) ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ದರ್ಶನ್ ಸಂಭ್ರಮಿಸಿದ್ದರು.