ಕಲಬುರಗಿ:- ರಾಜ್ಯ ಕಾಂಗ್ರೇಸ್ ಸರ್ಕಾರ ಸ್ಲಿಪಿಂಗ್ ಸರ್ಕಾರ ಎಂದು ಬಿಜೆಪಿ ಟ್ವಿಟ್ ಮಾಡಿರೋ ವಿಚಾರಕ್ಕೆ ಸಿಎಂ ಸಲಹೆಗಾರ ಶಾಸಕ ಬಿಆರ್ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಬಿಜೆಪಿಯವರು ಯಾವುದೋ ನಶೆಯಲ್ಲಿದ್ದಾರೆ..
ಶಿಮೂಗ್ಗದಲ್ಲಿ ಇಂದು ಯುವನಿಧಿ ಯೋಜನೆಗೆ ಚಾಲನೆ ಸಿಕ್ಕಿದೆ ಇದು ಸ್ಲಿಪಿಂಗ್ ಸರ್ಕಾರನಾ..!?
ಅನ್ನಭಾಗ್ಯ,ಗೃಹಜ್ಯೋತಿ,ಗೃಹಲಕ್ಷ್ಮಿ ನೀಡುತ್ತಿದ್ದೆವೆ ಇದು ಸ್ಲಿಪ್ಂಗ್ ಸರ್ಕಾರನಾ..?
ಸುಮ್ಮನೆ ಏನೋ ಮಾತಾಡಬೇಕು ಅಂತಾ ಸೋಲಿನ ಹತಾಶೆಯಲ್ಲಿ ಮಾತಾಡುತ್ತಿದ್ದಾರೆ..
ದಕ್ಷಿಣ ಭಾರತದಲ್ಲಿ ಈ ಬಾರಿ ಬಿಜೆಪಿಗೆ ಅವಕಾಶ ಇಲ್ಲ ಅಂತ ಹೇಳಿದ್ರು. ಇದೇವೇಳೆ ನನಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಅನ್ನೋ ಆಸೆಯಿದೆ. ಹೀಗಾಗಿ ಹೈಕಮಾಂಡ್ ಗೆ ಹೇಳಿದ್ದೇನೆ ಬೀದರ್ ಕ್ಷೇತ್ರದಿಂದ ಟಿಕೆಟ್ ಕೊಟ್ರೆ ನಿಲ್ಲೋಕೆ ನಾನು ರೆಡಿ ಅಂದ್ರು..