ಹುಬ್ಬಳ್ಳಿ: ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಅನುಕೂಲ ಅಗಿದೆಯೋ ಇಲ್ಲವೋ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಬಸ್ಸನ್ನು ನಂಬಿಕೊಂಡವರಿಗೆ ದೊಡ್ಡ ಸಮಸ್ಯೆಯಂತೂ ಆಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಬಸ್ ಸಂಖ್ಯೆ ಹಾಗೂ ಮ್ಯಾನ್ ಪವರ್ ಜಾಸ್ತಿ ಮಾಡಬೇಕಿದ್ದ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ.
ಹೌದು.. ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ಸಿಗಾಗಿ ಜನರು ಸಾಕಷ್ಟು ಸರ್ಕಸ್ ಮಾಡುವಂತಾಗಿದೆ. ಅಲ್ಲದೇ ಸಂಜೆ ಅವಧಿ ಹಾಗೂ ಬೆಳಗಿನ ಕಚೇರಿಗಳ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳಂತೂ ಅನುಭವಿಸುತ್ತಲೇ ಸಾಗಿದ್ದಾರೆ. ಬಸ್ಸಿನಲ್ಲಿ ಸೀಟ್ ಹಿಡಿಯುವುದು ಇರಲಿ ಬಸ್ಸಿನ ಫುಟ್ ರೆಸ್ಟ್ ಮೇಲೆ ಜಾಗೆ ಸಿಕ್ಕರೂ ಸೌಭಾಗ್ಯ ಎನ್ನುವಂತಾಗಿದೆ. ಈಗಾಗಲೇ ಬಸ್ಸಿನ ಪ್ರಮಾಣ ಹೆಚ್ಚಿಗೆ ಮಾಡಬೇಕಿದ್ದ ಸಾರುವೆ ಸಾರಿಗೆ ಸಂಸ್ಥೆ ಇರುವ ಮ್ಯಾನ್ ಪವರ್ ನಲ್ಲಿಯೇ ಹೆಚ್ಚಿನ ಸೆಡ್ಯೂಲ್ ಮಾಡುತ್ತೇವೆ ಅಂತಾರೇ..
ಇನ್ನೂ ಪ್ರಯಾಣಿಕರ ಸಂಖ್ಯೆ ತಿಂಗಳಿಗೆ 20 ಲಕ್ಷ ದಾಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ ವಿನಃ ಬಸ್ಸುಗಳ ಸಂಖ್ಯೆ ಮಾತ್ರ ಏರಿಕೆ ಕಂಡಿಲ್ಲ. ಅಲ್ಲದೇ ಸಂಜೆ ಸಮಯದಲ್ಲಿ ವಯೋವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಬಸ್ಸಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರು ಉತ್ತರ ಕರ್ನಾಟಕಕ್ಕೆ 884 ಬಸ್ ಖರೀದಿಯ ಭರವಸೆ ನೀಡಿದ್ದಾರೆ. ಆದರೆ ಜನರ ಭವಣೆ ನೀಗಿಸಲು ಯಾವಾಗ ಬರುತ್ತದೆಯೋ ಎಂಬುವಂತಾಗಿದೆ.
ಒಟ್ಟಿನಲ್ಲಿ ಬಸ್ಸಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಸರ್ಕಾರ ಭರವಸೆ ಮಾತನ್ನು ಸುಡುತ್ತಿರುವ ಹಂಚಿನ ಮೇಲೆ ನೀರು ಹಾಕುವಂತೆ ಮಾಡದೇ ಕೂಡಲೇ ಬಸ್ ಗಳನ್ನು ರಸ್ತೆಗೆ ಇಳಿಸಬೇಕಿದೆ.