ಬೆಂಗಳೂರು : ನಗರ ಪೊಲೀಸ್ ಇಲಾಖೆಯ ಈಶಾನ್ಯ ವಿಭಾಗದ ಪೊಲೀಸರು ಇಂದು ಯಲಹಂಕದಲ್ಲಿ ಡ್ರಗ್ಸ್ ಜಾಗೃತಿ ವಾಕಥಾನ್ ನಡೆಸಿದರು.. ನಗರ ಪೊಲೀಸ್ ಅಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ರಮಣಗುಪ್ತ, ಚಿತ್ರನಟಿ ಅನುಪ್ರಭಾಕರ್- ರಘುಮುಖರ್ಜಿ ಡ್ರಗ್ಸ್ ಜಾಗೃತಿ ವಾಕಥಾನ್ ಗೆ ಹಸಿರುದ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು..
ಇಂದಿನ ಯುವಜನಾಂಗ ಕಾಲೇಜು ವಿದ್ಯಾರ್ಥಿಗಳು ಮೋಜು ಮಸ್ತಿ ಹೆಸರಲ್ಲಿ ದೂಮಪಾನ ಮದ್ಯಪಾನ ಚಟಗಳಿಗೆ ದಾಸರಾಗ್ತಿದ್ದಾರೆ.. ಜೊತೆಗೆ ಸಿಗರೇಟ್, ಗಾಂಜಾ, ಡ್ರಗ್ಸ್ ಸ್ನೇಹಿತರು, ಪಾರ್ಟಿಗಳ ಹೆಸರಲ್ಲಿ ದಿಕ್ಕು ತಪ್ಪುತ್ತಿದ್ದಾರೆ.. ಸಹವಾಸದೋಷ ಹೆಸರಲ್ಲಿ ಯುವ ಸಮುದಾಯ ನಾಶವಾಗ್ತಿದೆ.
ಆದ್ದರಿಂದ ಯುವ ಸಮುದಾಯ ಡ್ರಗ್ಸ್ ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನ ನಾಶಮಾಡಿಕೊಳ್ಳಬೇಡಿ ಎಂದು ಪೊಲೀಸರು ಜಾಗೃತಿಮೂಡಿಸಿದರು.. ವೀರಸನ್ಯಾಸಿ ವಿವೇಕಾನಂದರ ಹುಟ್ಟು ಹಬ್ಬವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸುತ್ತಿದೆ.. ಇದರ ಅಂಗವಾಗಿ ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸ್ ಠಾಣೆ ಸಮೀಪದ ಅಕ್ಷಯ್ ಗಿರೀಶ್ ಸರ್ಕಲ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
ಇದೇ ವೇಳೆ ಯಲಹಂಕ ವ್ಯಾಪ್ತಿಯ ಹತ್ತಾರು ಖಾಸಗಿ ಕಾಲೇಜುಗಳ ಎರಡು ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಡ್ರಗ್ಸ್ ನ ಬಳಸಲ್ಲ ಎಂದು ಪ್ರತಿಜ್ಞಾವಿಧಿ ಭೋದಿಸಲಾಯ್ತು. ಡ್ರಗ್ಸ್ ಜಾಗೃತಿ ವಾಕಥಾನ್ ಯಲಹಂಕ ಶೇಷಾದ್ರಿ ಪುರಂ ನ ಕಾಲೇಜ್ ಬಳಿಯ ಅಕ್ಷಯ್ ಗಿರೀಶ್ ಸರ್ಕಲ್ ನಲ್ಲಿ ಪ್ರಾರಂಭವಾಗಿ ಡೈರಿಸರ್ಕಲ್, ಯಲಹಂಕ ಉಪನಗರ ಬಸದ ನಿಲ್ದಾಣ, ಚಿಕ್ಕಬೊಮ್ಮಸಂದ್ರ ಸರ್ಕಲ್, ಯಲಹಂಕ ನ್ಯೂಟೌನ್ ಕ್ಲಬ್ ಗಳ ಮೂಲಕ ಮತ್ತೆ ಅಕ್ಷಯ್ ಗಿರೀಶ್ ಸರ್ಕಲ್ ಗೆ ಬರುವ ಮೂಲಕ ವಾಕಥಾನ್ ಮುಕ್ತಾಯವಾಯ್ತು.. ಇದೇ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿ ಪೊಲೀಸರ ಜೊತೆ ಜನರು ಕೈಜೋಡಿಸಿ ಡ್ರಗ್ಸ್ ನಿಂದ ದೂರ ಇರಬೇಕು.
ಸ್ವಾಸ್ಥ್ಯ ಸಮಾಜದ ನಿರ್ಮಾಣವನ್ನು ಸಮಾಜದ ಎಲ್ಲರೂ ಸೇರಿ ಮಾಡಬೇಕಿದೆ ಎಂದರು.. ಇನ್ನು ಚಿತ್ರನಟಿ ಅನುಪ್ರಭಾಕರ್ ಮಾತನಾಡಿ ಪೊಲೀಸರ ಕರ್ತವ್ಯದ ಜೊತೆ ಜನರಾದ ನಾವು ಕೈಜೋಡಿಸಿದಾಗ ಉತ್ತಮ. ಸಮಾಜ ನಿರ್ಮಾಣ ಸಾದ್ಯ ಎಂದರು..