ಗದಗ: ಜಿಲ್ಲೆಯ ಮುಂಡರಗಿಯ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯಿಂದ ಮುಖಂಡ ದೇವಪ್ಪ ಇಟಗಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆ ಮಹತ್ತರ ಉದ್ದೇಶದ ಸಂಕಲ್ಪಕ್ಕಾಗಿ ರಾಮರಾಜ್ಯಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಶದೊಂದಿಗೆ ಆಂಜನೇಯ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆಯನ್ನ ಆರಂಭಿಸಲಾಗಿದೆ.
ಮುಂಡರಗಿ ನಗರದ ಕೋಟೆ ಭಾಗದ ಆಂಜನೇಯನ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿದ್ದು ಸಂಘದ ಪ್ರಮುಖರಾದ ಎಸ್.ಆರ್.ರಿತ್ತಿ ಮತ್ತು ಮಂಜುನಾಥ ಇಟಗಿ ಅವರು ಪಾದಯಾತ್ರೆಗೆ ಚಾಲನೆಯನ್ನ ನೀಡಿದ್ರು.
ನಾಳೆ ರಾತ್ರಿ 8 ಘಂಟೆಗೆ ಪಾದಯಾತ್ರಿಗಳ ತಂಡ ಅಂಜನಾದ್ರಿ ತಲುಪಲಿದ್ದು ಪ್ರಧಾನಿ ನರೇಂದ್ರ ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.