ಆಂಧ್ರ ಪ್ರದೇಶ- ಇಲ್ಲಿನ ಚಿತ್ತೂರು ಜಿಲ್ಲೆಯಲ್ಲಿ ತನ್ನ ಪತಿ ಖರ್ಚಿಗೆ 50 ರೂಪಾಯಿ ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ರಾಧಾ ಆತನ ಪತಿ ಅನಂತಕುಮಾರ್ ಜೊತೆ ಚಿತ್ತೂರು ಜಿಲ್ಲೆ ಪೊನ್ನೆಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಪತಿ ಅನಂತ್ ಕುಮಾರ್ ಬಳಿ ತನ್ನ ಖರ್ಚಿಗೆ 50 ರೂಪಾಯಿ ಕೇಳಿದ್ದಾಳೆ. ಹಣ ನೀಡಲು ಪತಿ ನಿರಾಕರಿಸಿದ್ದಾನೆ. ಇದಕ್ಕೆ ಬೇಸರಗೊಂಡಿದ್ದ ರಾಧಾ ಮೊಬೈಲ್ ಕ್ಲೀನಿಂಗ್ ಆಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೆಲ್ಫೋನ್ ಕ್ಲೀನಿಂಗ್ ಆಯಿಲ್ ಕುಡಿದು ರಾಧಾ ತೀವ್ರ ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಈ ಕುರಿತು ರಾಧಾ ಅವರ ತಂದೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.