ವಿಜಯಪುರ:- ನಗರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅಂತರರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಬಂದಿದೆ ಅಂತ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಇನ್ನು ಈ ಚಡ್ಡಿ ಗ್ಯಾಂಗ್ ಚಡ್ಡಿ, ಬನಿಯಾನ್, ಮಾಸ್ಕ್ ಮಾತ್ರ ಧರಿಸಿ ಮನೆಗೆ ನುಗ್ಗುತ್ತಾರೆ. ಚಡ್ಡಿ ಗ್ಯಾಂಗ್ನಲ್ಲಿ ೫ ರಿಂದ ೮ ಜನರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುತ್ತಾರೆ ಎನ್ನಲಾಗಿದೆ.
ಇದೇ ವೇಳೆ ಬೇರೆ ಊರುಗಳಿಗೆ ತೆರಳುವಾಗ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಚಡ್ಡಿ ಗ್ಯಾಂಗ್ ವೇಷಭೂಷಣದಂತೆ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಲು ಸೂಚನೆ ನೀಡಲಾಗಿದೆ.