ಬೆಂಗಳೂರು: ಗ್ಯಾರಂಟಿ ಯೋಜನೆ ಅನುಷ್ಠಾನ ನೆಪದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು ಆರಂಭಿಸಿದೆ.ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪವ ದೃಷ್ಟಿಯಿಂದ,ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಕಮಿಟಿ ರಚನೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಮಾಡಿದ್ದು,ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ರೀತಿ ಆಗಿದೆ ಎಂದಿದ್ದಾರೆ.
ಯೆಸ್,ಲೋಕಸಭೆ ಚುನಾವಣೆಗೆ ಗ್ಯಾರಂಟಿ ಅಸ್ತ್ರ ಮುಖಾಂತರ ಚುನಾವಣಾ ಅಖಾಡಕ್ಕೆ ಇಳಿಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ.ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದರೂ,ಜನಾಭಿಪ್ರಾಯ ಪಡೆಯಲು ಕಾಂಗ್ರೆಸ್ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪುವ ದೃಷ್ಠಿಯಿಂದ,ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲು ಕಮಿಟಿ ರಚನೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.
ಈ ಮೂಲಕ ಗ್ಯಾರಂಟಿ ಯೋಜನೆಯನ್ನ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ಕೈ ಪಡೆ ತೀರ್ಮಾನ ಮಾಡಿದೆ.ರಾಜ್ಯಾಧ್ಯಂತ ಸುಮಾರು ಸುಮಾರು 5000 ಕಾಂಗ್ರೆಸ್ ಕಾರ್ಯಕರ್ತರು ಈ ಕಮಿಟಿಯಲ್ಲಿ ಇರಲಿದ್ದಾರೆ.ಕಮಿಟಿಗೆ ಸರ್ಕಾರದಿಂದಲೇ ಖರ್ಚು-ವೆಚ್ಚ ಭರಿಸಲಾಗುತ್ತಿದೆ.ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ಕೆಂಡಕಾರಿದೆ.
ಇನ್ನು ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲು ಕಮಿಟಿ ಮಾಡುವುದಾಗಿ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಕೆರಳಿ ಕೆಂಡವಾಗಿದೆ.ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಕ್ರೋಶ ವ್ಯಕ್ತಮಾಡಿದ್ದು, ಕಾಂಗ್ರೆಸ್ ಚೇಲಾಗಳ ಬಿರಿಯಾನಿ ಊಟಕ್ಕೆ ಕಮಿಟಿ ರಚನೆ ಮಾಡಿದ್ದಾರೆ.5 ವರ್ಷಕ್ಕೆ 150 ಕೋಟಿ ಆಗಲಿದೆ.ಇದು ಜನರ ತೆರಿಗೆ ದುಡ್ಡು ಎಂದಿದ್ದಾರೆ. ಒಟ್ಟಾರೆ,ಗ್ಯಾರಂಟಿ ಯೋಜನೆ ಜಾರಿ ವಿಚಾರವನ್ನೇ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡು ಲೋಕ ಸಮರದಲ್ಲಿ ಫೈಟ್ ಮಾಡಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ.ಆದ್ರೆ,ಜನರ ತೆರಿಗೆ ದುಡ್ಡು ಪೋಲು ಆಗುತ್ತಿದೆ ಎಂದು ಪ್ರತಿಪಕ್ಷಗಳು,ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡವಾಗಿವೆ.