ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಲಾರಿ ಮಾಲೀಕರು ತಿರುಗಿಬಿದ್ದಿದ್ದಾರೆ.ಕೇಂದ್ರ ಸರ್ಕಾರ ಜಾರಿ ಮಾಡಿರೋ ಹಿಟ್ ಆಂಡ್ ರನ್ ಕಾಯ್ದೆ ಜಾರಿ ಖಂಡಿಸಿ ರಾಜ್ಯದಲ್ಲಿ ಜನವರಿ 17 ರ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಮಾಡಿದ್ದಾರೆ.ಇಂದು ದಕ್ಷಿಣ ಭಾರತ ಲಾರಿ ಮಾಲೀಕರ ಸಂಘ ಬೆಂಗಳೂರಿನಲ್ಲಿ ಮೀಟಿಂಗ್ ನಡೆಸಿ ಹೋರಾಟ ರೂಪರೇಷ್ಗಳನ್ನ ಸಿದ್ದಪಡಿಸಿದ್ದಾರೆ. ಹಾಗಾದರೆ ಲಾರಿ ಮುಷ್ಕರದಿಂದ ಏನಿರುತ್ತೆ .. ಏನಿರಲ್ಲ.. ಅಂತ ನೋಡಿಕೊಂಡು ಬರೋಣ ಬನ್ನಿ..
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದಲ್ಲ ಒಂದು ವಿವಾದಿತ ಕಾನೂನುಗಳನ್ನ ಜಾರಿ ಮಾಡ್ತಾನೆ ಇದೆ.ಆರಂಭದಲ್ಲೇ ರೈತ ವಿರೋಧಿ ಕಾನೂನುಗಳನ್ನ ಜಾರಿ ದೇಶವ್ಯಾಪ್ತಿ ಟೀಕೆಗೆ ಗುರಿಯಾದ ಮೋದಿ ಸರ್ಕಾರ ಸರ್ಕಾರ ಇದೀಗ ಚಾಲಕ ವಿರೋಧಿ ಕಾನೂನನ್ನ ಜಾರಿ ಮಾಡಲು ಸಿದ್ದತೆ ನಡೆಸಿದೆ.ಕಾಯ್ದೆ ಜಾರಿ ಮುನ್ನವೇ ದೇಶವ್ಯಾಪ್ತಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಉತ್ತರ ಭಾರತದಲ್ಲಿ ಹಿಟ್ ಆಂಡ್ ರನ್ ಕಾಯ್ದೆಯ ವಿರುದ್ದ ಯಶಸ್ವಿಯಾಗಿ ಹೋರಾಟ ನಡೆದಿದೆ. ಇದೀಗ ದಕ್ಷಿಣ ಭಾರತದಲ್ಲಿ ಲಾರಿ ಮಾಲೀಕರು ತೀವ್ರ ಹೋರಾಟ ನಡೆಸಲು ತೀರ್ಮಾನ ಮಾಡಿದ್ದಾರೆ.
ಹೌದು ಹಿಟ್ ಅಂಡ್ ರನ್ ಕಾಯ್ದೆ ಸಂಬಂಧ ಇವತ್ತು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಲಾರಿ ಮಾಲೀಕರು ಸಭೆ ನಡೆಸಿದ್ರು. ಕರ್ನಾಟಕ , ಕೇರಳ, ಆಂಧ್ರ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳ ಲಾರಿ ಮಾಲೀಕರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಜ.17ರಿಂದ ಅರ್ನಿಷ್ಟಾವಧಿ ಲಾರಿ ಮುಷ್ಕರ ನಡೆಸಲು ನಿರ್ಧರಿಸಿದ್ರು .ಕೇಂದ್ರ ಸರ್ಕಾರದ ಹಿಟ್ ಐಂಡ್ ರನ್ ಕಾನೂನು ನಯಾ ರೂಲ್ಸ್ ಜಾರಿಗೆ ಮುಂದಾಗ್ತಿರೋ ಕೇಂದ್ರ ಸರ್ಕಾರ ವಿರುದ್ಧ ಸಿಡಿದೆದ್ದಿರೋ ಲಾರಿ ಓನರ್ಸ್ ಅಸೋಸಿಯೇಷನ್ ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.. ಜ.16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದ್ದಾರೆ.
ಕೇಂದ್ರದ ಹಿಟ್ ಆ್ಯಂಡ್ ರನ್ ಕಾಯ್ದೆಯನ್ನ ನಾವು ಖಂಡಿಸ್ತಿದ್ದೇವೆ. ಈ ಕಾಯ್ದೆಯಿಂದ ಲಾರಿ ಮಾಲೀಕ, ಚಾಲಕರಿಗೆ ತೊಂದರೆ ಆಗುತ್ತೆ. ಕಾಯ್ದೆಯಡಿ ಲಕ್ಷ ಲಕ್ಷ ದಂಡ ಕಟ್ಟಲು ಚಾಲಕರಿಂದ ಅಸಾಧ್ಯ. ಮುಷ್ಕರದಿಂದ 6 ರಿಂದ 8 ಲಕ್ಷ ಲಾರಿ ಸಂಚಾರ ನಿಲ್ಲಲಿದೆ. ಅಗತ್ಯ ವಸ್ತು ಸಾಗಣೆ ಬಿಟ್ಟು ಎಲ್ಲಾ ಲಾರಿ ಸಂಚಾರ ಬಂದಾಗುತ್ತೆ.ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತರಲು ಉದ್ದೇಶಿಸಿರುವ ಕಾಯ್ದೆ ರದ್ದಿಗೆ ಲಾರಿ ಮಾಲೀಕರು ಆಗ್ರಹಿಸಿದ್ದಾರೆ.
ಈ ಹಿಂದೆ ಐಪಿಸಿ ಸೆಕ್ಷನ್ ಅಡಿ ಯಾರಾದ್ರೂ ಸಾವನ್ನಪ್ಪಿದ್ರೆ 2 ವರ್ಷ ಜೈಲು ಶಿಕ್ಷೆ ಇತ್ತು. ಇದೀಗ ಹೊಸ ಕಾನೂನಿನಡಿ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಸೇರಿದಂತೆ 7 ಲಕ್ಷದವರೆಗೆ ದಂಡದ ಪ್ರಸ್ತಾಪ ಇದೆ.ಅಪಘಾತದ ಬಳಿಕ ಓಡಿ ಹೋಗದೇ ಘಟನಾ ಸ್ಥಳದಲ್ಲೇ ಇದ್ದರೂ ಕೂಡಾ 5 ವರ್ಷ ಜೈಲು ಶಿಕ್ಷೆ. ಇದ್ರಿಂದ ಲಾರಿ, ಟ್ರಕ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಲಾರಿ ಮಾಲೀಕರನ್ನಾಗಲೀ ಅಥವಾ ಈ ಉದ್ಯಮದಲ್ಲಿ ಇರುವ ಯಾರನ್ನೂ ಸಂಪರ್ಕಿಸದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
ಲಾರಿ ಮುಷ್ಕರದ ದಿನ ಸುಮಾರು 9 ರಿಂದ 10 ಲಕ್ಷ ವಾಹನ ಸಂಚಾರ ಬಂದ್ ಆಗಲಿದೆ. ಮರಳು , ಸಿಮೆಂಟ್ ಸಪ್ಲೈ, ಇಂಡಸ್ಟ್ರಿ ಮೆಟಿರಿಯಲ್ ಬಂದ್ ಆಗಲಿದೆ. ನೀರು, ಹಾಲು, ಪೆಟ್ರೋಲಿಯಂ, ತರಕಾರಿ ನೀರು ಮೆಡಿಸನ್ ಸರಬರಾಜು ಇರಲಿದೆ.ಒಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಲಾರಿ ಮಾಲೀಕರ ಜಂಗಿ ಕುಸ್ತಿಯಲ್ಲಿ ದೇಶಾದ್ಯಂತ ಸಾರ್ವಜನಿಕರು ತೊಂದರೆಯಾಗೋ ಸಾಧ್ಯತೆ ಇದೆ. ಅನಿರ್ಧಿಷ್ಟಾವಧಿ ಮುಷ್ಕರದಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸರ್ಕಾರ ಕೂಡಲೇ ಮದ್ಯಪ್ರವೇಶಿಸಿ ಸಮಸ್ಯೆ ಒಗೆಹರಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.