ದೇವನಹಳ್ಳಿ:- ದೇವನಹಳ್ಳಿಯಂದ ದೆಹಲಿಗೆ ತೆರಳುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಆಹಾರ ಸಚಿವರಿಂದ ರಾಮಕೋಟಿ ಜಪ ಮಾಡಲಾಗಿದೆ.
ಎಐಸಿಸಿ ಸಭೆಗೆ ತೆರಳುವಾಗ ರಾಮಕೋಟಿ ಜಪ ಮಾಡಿದ್ದಾರೆ. ಮುನಿಯಪ್ಪ ಅವರು, ಪ್ರತಿದಿನ ರಾಮಕೋಟಿ ರಾಮನಾಮ ಬರೆಯುತ್ತಿದ್ದು, ಒಂದ್ಕಡೆ ಅಯೋದ್ಯೆ ರಾಮಮಂದಿರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆರೋಪ ಪ್ರತ್ಯಾರೋಪದ ವಿಷಯವಾಗಿದೆ.
ಇನ್ನೊಂದ್ಕಡೆ ಕಾಂಗ್ರೆಸ್ ಸಚಿವರಿಂದಲೇ ರಾಮನಾಮ ಜಪ ಮಾಡಲಾಗುತ್ತಿದೆ. ಅಯೋದ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಟಾಪನೆ ಕಾರ್ಯ ಜನವರಿ 22ಕ್ಕೆ ನೆರವೇರಲಿದೆ.ಕಾಂಗ್ರೆಸ್ಸಿನ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಲಾಗಿತ್ತು. ಕಾರಣಾಂತರಗಳಿಂದ ಕಾಂಗ್ರೆಸ್ ನಾಯಕರು ಆಯೊದ್ಯೆ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ. ಸಿದ್ದರಾಮಯ್ಯ ಬೇರೆ ಅಯೊದ್ಯೆ ರಾಮಮಂದಿರ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆ.ಹೆಚ್.ಮುನಿಯಪ್ಪರವರ ರಾಮನಾಮ ಜಪ ಕುತೂಹಲ ಕೆರಲಿಸಿದೆ..