ಚಿಕ್ಕಬಳ್ಳಾಪುರ:- ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ಗೆ ಸೈಬರ್ ವಂಚಕರು ಭಾರೀ ಪಂಗನಾಮ ಹಾಕಿದ ಘಟನೆ ಜರುಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕಟಮಾಚನಹಳ್ಳಿ ಗ್ರಾಮದ ನಿವಾಸಿ ಶಾಲಿನಿ ಎನ್ನುವವರು ಟಾಟಾ ಕನ್ಸಲ್ಟೆನ್ಸಿಯಲ್ಲಿ ಸಾಫ್ಟ್ವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗೂಗಲ್ನಲ್ಲಿ ರಿವ್ಯೂ ಮಾಡಲು ಒಂದು ರಿವ್ಯೂಗೆ 50 ರೂ.ಗಳಂತೆ ನೀಡುತ್ತಾರೆಂದು ಅಪರಿಚಿತ ಸೈಬರ್ ವಂಚಕರು ನಂಬಿಸಿದ್ದಾರೆ. ನಂತರ ಅವರು ಕಳುಹಿಸಿದ ಲಿಂಕ್ ಮೂಲಕ ಪಾರ್ಟ್ಟೈಮ್ ಜಾಬ್ ಮಾಡಲು ಹೋಗಿ ಬರೋಬ್ಬರಿ 2,32,600 ರೂ. ಹಣ ಇನ್ವೆಸ್ಟ್ ಮಾಡಿದ್ದಾರೆ.
ಮಹಿಳಾ ಸಾಫ್ಟ್ವೇರ್ ಕಡೆಯಿಂದ ಹಣ ಇನ್ವೆಸ್ಟ್ ಮಾಡಿಸಿಕೊಂಡ ಸೈಬರ್ ವಂಚಕರು, ರಿಟರ್ನ್ ಹಣ ನೀಡದೆ ವಂಚಿಸಿದ್ದಾರೆ. ಇದರಿಂದ ನ್ಯಾಯ ಕೊಡಿಸುವಂತೆ ಇಂಜಿನಿಯರ್ ಶಾಲಿನಿ ಆರ್. ಅವರು ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.