ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾದರಿ ರಸ್ತೆಯನ್ನಾಗಿ ರೂಪಿಸಿದ ಟೆಂಡರ್ ಶ್ಯೂರ್ ರಸ್ತೆ ಈಗ ಯಾರಿಗೂ ಬೇಡವಾಗಿದೆಯೇ ಅನ್ನೋ ಅನುಮಾನಗಳು ಕಾಡತೊಡಗಿವೆ. ನಗರದಲ್ಲಿ ಮಾದರಿ ರಸ್ತೆ ರೂಪಿಸುವ ಸದುದ್ದೇಶದಿಂದ ಹುಬ್ಬಳ್ಳಿ ವಿದ್ಯಾನಗರದ ಶಿರೂರು ಪಾರ್ಕ್ ನಿಂದ ತೋಳನ ಕೆರೆವರೆಗೆ 42 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಿಸಲಾಗಿದ್ದು, ಇದು ಅತ್ಯಂತ ವಿಶೇಷತೆ ಹೊಂದಿರುವ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಆದರೀಗ ಈ ರಸ್ತೆ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ವಾಕಿಂಗ್ ಪಾತ್ ಮೇಲೆಯೇ ಸಾವಿರಾರು ರೂಪಾಯಿ ಕರ್ಚು ಮಾಡಿ ಡಸ್ಟ್ ಬಿನ್ ಗಳನ್ನ ಇರಿಸಿದ್ದು, ಈ ಕಸದ ಡಬ್ಬಿಗಳೇ ಈಗ ಸಾರ್ವಜನಿಕರ ಕಿರಿಕಿರಿಗೆ ಕಾರಣವಾಗಿದ್ದು, ವಿಶಿಷ್ಠ ರಸ್ತೆ ಎಂಬ ಹೆಗ್ಗಳಿಕೆ ಪಡೆದಿದ್ದ ರಸ್ತೆಗೆ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ. ಅಕ್ಕಪಕ್ಕದ ಮನೆಯವರು ಸೇರಿ ಹೊಟೇಲ್ ಹಾಗೂ ಚಾಟ್ ಸೆಂಟರ್,
South Korea: ನಾಯಿ ಮಾಂಸ ಸೇವನೆಗೆ ರದ್ದು : ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ!
ಟೀ ಅಂಗಡಿಯವರು ಕಸವನ್ನ ಬೇಕಾಬಿಟ್ಟಿ ಎಸೆದು ಹೋಗುತ್ತಿದ್ದರೂ ಅದರನ್ನ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಹೀಗಾಗಿ ರಸ್ತೆಯ ಅಕ್ಕಪಕ್ಕದಲ್ಲಿ ಬೀಡಾಡಿ ದನಗಳು ಬೀಡು ಬಟ್ಟಿದ್ದು, ಇಡಿ ಪರಿಸರ ಗಬ್ಬೆದ್ದು ನಾರ ತೊಡಗಿದೆ. ಇದರಿಂದಾಗಿ ರೋಸಿ ಹೋಗಿರುವ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.