ಬೆಂಗಳೂರು ನಮ್ಮ ಮೆಟ್ರೋಗೆ ನೂತನ ಸಾರಥಿ ನೇಮಕ ಮಾಡಲಾಗಿದ್ದು BBMRCL ನೂತನ ಎಂಡಿ ಆಗಿ ಮಹೇಶ್ವರ್ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದ್ದು ಅಂಜುಂ ಪರ್ವೇಜ್ ಅವರ ಸ್ಥಾನದಿಂದ ತೆರವುಗೊಳಿಸಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಬೆನ್ನಲ್ಲೆ BMRCL ಎಂಡಿ ವರ್ಗಾವಣೆಯಾಗಿದ್ದು ನಮ್ಮ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ತೇಜಸ್ವಿ ಸೂರ್ಯ ಈ ಸಂಬಂಧ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪೂರಿ ಯವರನ್ನ ಭೇಟಿ ಮಾಡಿದ್ದ ತೇಜಸ್ವಿ ಸೂರ್ಯ
ನಮ್ಮ ಮೆಟ್ರೋದ ಫೇಸ್- 2 ಕಾಮಗಾರಿ ತುಂಬಾ ವಿಳಂಬ ಆಗ್ತಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗ್ತಿದೆ ಇದೆಕ್ಕೆಲ್ಲಾ ಕಾರಣ ಬಿಎಂಆರ್ ಸಿಎಲ್ ನಲ್ಲಿ ಪೂರ್ಣಾವದಿ ಎಂಡಿ ಇಲ್ಲ ಎಂದು ಆರೋಪ ರಾಜ್ಯ ಸರ್ಕಾರದ ಸೂಕ್ತ ವ್ಯಕ್ತಿಯನ್ನ ಶಿಫಾರಸ್ಸು ಕೇಳಿದ್ದ ಸಂಸದ ಕೇಂದ್ರದಿಂದ ನಾನು ಅನುಮತಿ ಕೊಡಿಸೋದಾಗಿ ಹೇಳಿದ್ದ ತೇಜಸ್ವಿ ಸೂರ್ಯ ಹೀಗಾಗಿ ಸುದ್ದಿಗೋಷ್ಠಿ ಮೂಲಕ ಪೂರ್ಣಾವಧಿ ಮೆಟ್ರೋ ಎಂಡಿ ನೇಮಕಕ್ಕೆ ಆಗ್ರಹ ಮಾಡಿದ್ದರು
ತೇಜಸ್ವಿ ಸೂರ್ಯ ಆಗ್ರಹ ಬೆನ್ನಲ್ಲೆ BMRCL ಎಂಡಿ ಅಂಜುಂ ಫರ್ವೇಜ್ ತೆರವುಗೊಳಿಸಿ ಆ ಜಾಗಕ್ಕೆ BMRCL ಗೆ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ ನೇಮಕ ಗೊಂಡಿದ್ದಾರೆ BMRCL ನೂತನ ಎಂಡಿ ಆಗಿ ಮಹೇಶ್ವರ್ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ.