ಬೆಂಗಳೂರು: ಲಕ್ಷ ಲಕ್ಷ ದುಡೀತಿದ್ದ ಟೆಕ್ಕಿ ಪಿಂಪ್ ಆಗಿದ್ದು ಹೇಗೇ ಗೊತ್ತಾ ಹೈಟೆಕ್ ವೇಶ್ಯಾವಾಟಿಕೆಯ ಕಿಂಗ್ ಪಿನ್ ,ರಷ್ಯನ್ ಮಹಿಳೆ ಭಾರತದಲ್ಲಿರಲು ಕಾರಣವೇನು ಗೊತ್ತಾ ಇಲ್ಲಿದೆ ನೋಡಿ ಒಂದು ಭಯಾನಕ ಬೆಚ್ಚಿಬೀಳಿಸುವ ಸ್ಟೋರಿ
ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದನು . ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು ಆದರೆ ಇವನಿಗೆ ಕಂಟಕವಾಯ್ತು ಆತನೇ ಸೃಷ್ಟಿಸಿದ ಆ್ಯಪ್
ಬಿಇ ಪದವೀಧರ ಈಗ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಂದರ್ ಆಗಿದ್ದು ಟೆಕ್ಕಿ ಗೋವಿಂದರಾಜು ಸದ್ಯ ಹೈಟೆಕ್ ಪಿಂಪ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದವನು ಶೇರ್ ಮಾರ್ಕೆಟ್ ಚಟಕ್ಕೆ ಬಿದ್ದಿದ್ದ ತಾನು ದುಡಿದ ಅಷ್ಟೂ ಹಣವನ್ನ ಶೇರ್ಸ್ ಗಳಿಗೆ ಸುರೀತಿದ್ದ ಕೊನೆಗೆ ಎಷ್ಟೆ ದುಡಿದರೂ ಕೂಡ ಕೈಗೆ ಬರುತ್ತಿರಲಿಲ್ಲ ಸಾಲ ಕೂಡ ಮಾಡಿಕೊಂಡಿದ್ದ ಹಿನ್ನಲೆ ತಿಂಗಳ ಸಂಬಳ ಸಾಲ ತೀರಿಸೋಕೆ ಸರಿ ಹೋಗ್ತಿತ್ತು ಈ ಸಂಧರ್ಭದಲ್ಲಿ ತನ್ನ ಕಮ್ಯೂನಿಕೇಷನ್ ಗೆ ಎಂದು ಒಂದು ಆ್ಯಪ್ ನ್ನ ಸೃಷ್ಟಿಸಿಕೊಂಡಿದ್ದ ಮೊದ ಮೊದಲು ಗೆಳೆಯರ ಜೊತೆ ಸಂವಹನ ಮಾಡಲಷ್ಟೆ ಬಳಕೆಯಾಗ್ತಿತ್ತು ಈ ವೇಳೆ ಮತ್ತೊಬ್ಬ ಬಿ ಇ ಪದವೀಧರ ವೀಝಾಕ್ ಎಂಬಾತ ಗೋವಿಂದರಾಜುವಿಗೆ ತಲೆ ತುಂಬಿದ್ದ ವೇಶ್ಯಾವಾಟಿಕೆಯಲ್ಲಿ ಹಣವಿದೆ , ಅದರಲ್ಲೂ ವಿದೇಶಿ ಮಹಿಳೆಯರಿಗೆ ಒಳ್ಳೆಯ ಬೆಲೆ ಇದೆ ಎಂದು ತಲೆಗೆ ತುಂಬಿಸಿದ್ದ ಟೆಕ್ಕಿ ಸೃಷ್ಟಿ ಮಾಡಿರುವ ಆ್ಯಪ್ ತುಂಬಾ ಸೆಕ್ಯೂರ್ ಆಗಿರುವ ಪ್ರೈವೇಟ್ ಆಪ್
ಹೀಗಾಗಿ ತಮಗೆ ಬೇಕಾದವರನ್ನ ಮಾತ್ರ ಅದಕ್ಕೆ ಸೇರಿಸಿಕೊಳ್ತಿದ್ದ ಟೆಕ್ಕಿಯಾಗಿದ್ದ ವೇಳೆ ಸಿಗದಿದ್ದ ಹಣ ಈ ಆ್ಯಪ್ ನಿಂದ ಸಿಗ್ತಿತ್ತು ಹೀಗೆ ಸಂಪರ್ಕಕ್ಕೆ ಬಂದವಳೇ ಈ ಕಿಂಗ್ ಪಿನ್ ಬಿಯಾನ್ಯಾಝ್ 15 ವರ್ಷದ ಹಿಂದೆ ಸೆಲ್ವ ಎಂಬಾತನನ್ನ ಮದ್ವೆಯಾಗಿದ್ದ ಟರ್ಕಿ ಮಹಿಳೆ ಬಿಯನ್ಯಾಝ್ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ ಟರ್ಕಿ ಮಹಿಳೆ ನಂತರ ಇಲ್ಲಿಯವನನ್ನೇ ಮದ್ವೆಯಾಗಿದ್ದ ಬಿಯಾನ್ಯಾಝ್ ಇವರಿಬ್ಬರಿಗೆ ಒಂದು ಮಗು ಕೂಡ ಇದೆ ಪತಿ ಸೆಲ್ವ ಎಂಬಾತನಿಗೆ ಟಿಬಿ ಖಾಯಿಲೆ ಬರಬರುತ್ತಾ ಖಾಯಿಲೆ ಹೆಚ್ಚಾಗುತ್ತಿದ್ದಂತೆ ಬಿಯನ್ಯಾಜ್ ದೂರವಾಗುವ ಸೂಚನೆ ಸಿಕ್ಕಿತ್ತು ಇದನ್ನರಿತ ಸೆಲ್ವ, ಬಿಯನ್ಯಾಝ್ ಳ ಟರ್ಕಿ ಪಾಸ್ ಪೋರ್ಟ್ ನ್ನು ಹರಿದು ಹಾಕಿದ್ದ ಭಾರತದ ಪಾಸ್ ಪೋರ್ಟ್ ಕೂಡ ಮಾಡೋದಕ್ಕೆ ಸಾಧ್ಯವಾಗಲಿಲ್ಲ ಅದೂ ಅಲ್ಲದೆ ಮಗ ಇಲ್ಲೆ ಹುಟ್ಟಿದ ಕಾರಣ ಆತ ಈ ದೇಶದ ನಾಗರಿಕ ನಂತರ ಈಕೆಗೆ ಕೈ ಹಿಡಿದಿದ್ದೆ ಹೈಟೆಕ್ ವೇಶ್ಯಾವಾಟಿಕೆ ಕಳೆದ 10 ವರ್ಷದಿಂದ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬೆಳಕಿಗೆ
ರಷ್ಯಾ, ಖಜಕಿಸ್ತಾನ ಸೇರಿ ಬೇರೆ ಬೇರೆ ದೇಶಗಳಿಂದ ಯುವತಿಯರನ್ನು ಕರೆಸುತ್ತಿದ್ದರು. ಈ ವಿಚಾರ ತಿಳಿದ ಬೆಂಗಳೂರು ನಗರದ ಬಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಆರೋಪಿಗಳಾದ ವಿದೇಶಿ ಮಹಿಳೆ, ಗೋವಿಂದರಾಜು ಹಾಗೂ ವೈಶಾಕ್ನನ್ನ ಬಂಧಿಸಿದ್ದಾರೆ.