ಬೆಂಗಳೂರು: ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬಹಿಷ್ಕಾರ ವಿಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ಗರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಮಮಂದಿರದ ವಿಶೇಷ ಸಂದರ್ಭದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗ್ತಿದೆ ಕಾಂಗ್ರೆಸ್ ನವರಿಗೆ ಆಮಂತ್ರಣ ಇದ್ದರೂ, ಅವರು ಹೋಗದೇ ಇರೋದು ದುರ್ಧೈವದ ಸಂಗತಿ ಅವರ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿರೋದು ಅಕ್ಷಮ್ಯ ಅಪರಾಧ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಅವರು ಮುಂದೆ ಪಶ್ಚತಾಪ ಪಡುವ ಕಾಲ ಬರುತ್ತದೆ ಇವಾಗ್ಲಾದ್ರು ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಹೇಳಿದರು.