ಹುಬ್ಬಳ್ಳಿ: ಇಲ್ಲಿಯ ಎಂಎಜಿ ಸೊಸೈಟಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜ. 12ರಂದು ಸಂಜೆ 5ಕ್ಕೆ ಶಾಲೆಯ ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್ನಲ್ಲಿ ಏರ್ಪಡಿಸಲಾಗಿದೆ ಎಂದು ಸೊಸೈಟಿ ಚೇರ್ಮನ್ ಜಯಪ್ರಕಾಶ ಟೆಂಗಿನಕಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೆಎಲ್ಇ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆ ಅವರು ಲಯನ್ ಸಿದ್ದಣ್ಣ ಯಾವಗಲ್ ಮೆಮೋರಿಯಲ್ ಗೋಲ್ಡನ್ ಜುಬ್ಲಿ ಅನೆಕ್ಸ್ ಉದ್ಘಾಟಿಸುವರು. ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಬೆಂಗಳೂರಿನ ಜೆಎನ್ಸಿಎಎಸ್ಆರ್ ಪ್ರಾಧ್ಯಾಪಕ ಡಾ.ಎಸ್.ಎಂ. ಶಿವಪ್ರಸಾದ ಉಪನ್ಯಾಸ ನೀಡುವರು. ಇದೇ ವೇಳೆ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು.
ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಚೇರ್ಮನ್ ಗಿರೀಶ ಮಾನೆ ಮಾತನಾಡಿ, ಜ. 13ರಂದು ಸಂಜೆ 4ಕ್ಕೆ ಜಾಗತಿಕ ವಾರ್ಷಿಕ ಸಭೆ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾ ಗವರ್ನರ್ ವಾಸುದೇವ ವಾಲ್ವಾಲ್ಕರ್, ಶಾಸಕ ಶ್ರೀನಿವಾಸ ಮಾನೆ, ಮಾಜಿ ಹೆಚ್ಚುವರಿ ಡಿಜಿಪಿ ವಿಶ್ವನಾಥ ಸಜ್ಜನರ, ಕ್ಯಾಪ್ಟನ್ ನವೀನ ನಾಗಪ್ಪ, ಜಯಪ್ರಕಾಶ ಟೆಂಗಿನಕಾಯಿ ಇತರರು ಉಪಸ್ಥಿತರಿರುವರು ಎಂದರು.
ಸೊಸೈಟಿ ಅಧ್ಯಕ್ಷ ಡಾ.ಎನ್.ಆರ್. ಪಾಟೀಲ, ಕಾರ್ಯದರ್ಶಿ ಶಂಭು ಯಾವಗಲ್, ಸದಸ್ಯ ಡಾ. ರವಿ ನಾಡ್ಗೀರ, ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಉದಯ ಬಾಡಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.