ಬೀದರ್:– ಪ್ರಿಯಕರನ ಜೊತೆ ಮದುವೆ ಮಾಡಿಕೊಂಡಿದ್ದಕ್ಕೆ, ಕುಟುಂಬಸ್ಥರಿಂದ ಜೀವಭಯವಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ ರಕ್ಷಣೆ ಕೋರಿದ್ದ ನವಜೋಡಿಗಳ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಗೆ ಈಗಾಗಲೇ ಮೊದಲ ಮದುವೆ ಆಗಿರುವ ವಿಚಾರ ಬಹಿರಂಗವಾಗಿದೆ. ಆದ್ರೆ ಮದುವೆ ಒತ್ತಾಯವಾಗಿ ಮಾಡಲಾಗದೆ, ನನಗೆ ಮದುವೆ ಆಗಿದ್ದೆ ಗೊತ್ತಿಲ್ಲಾ ಎಂದು ಯುವತಿ ಹೇಳುತ್ತಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ……
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಲೊಕೇಶ್ ಹಾಗೂ ಭಾಲ್ಕಿ ತಾಲುಕಿನ ಕುರ್ನಳ್ಳಿ ನಿರ್ಮಲಾ ಪರಸ್ಪರ ಪ್ರೀತಿಸಿದ್ದಾರೆ. ಪ್ರೀತಿ ಬಳಿಕ ಅಕ್ಟೋಬರ್ 23 ರಂದು ಮದುವೆ ಆಗಿ, ಡಿಸೆಂಬರ್ 18 ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಬಳಿಕ ಹೈದರಾಬಾದ್ನಲ್ಲಿದ್ದು, ಜೀವನ ನಡೆಸಲು ಮುಂದಾಗಿದ್ದಾರೆ. ಆದ್ರೆ ಯುವತಿ ಕುಟುಂಬಸ್ಥರು ಜಿಲ್ಲೆಯ ಜನವಾಡ ಪೊಲೀಸ್ ಠಾಣೆಯಲ್ಲಿ ನೀಡಿದ ನಾಪತ್ತೆ ಪ್ರಕರಣ ಸಂಬಂಧ ಯುವತಿಯನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಣೆ ನೀಡಿದ್ದಾರೆ. ಆದ್ರೆ ಯುವತಿಗೆ ಈಗಾಗಲೇ ನಿತೇಶ ಎಂಬುವವರು ಮದುವೆ ಆಗಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಪೊಟೋಗಳು ಕೂಡಾ ಪೊಲೀಸ್ ಠಾಣೆಗೆ ನೀಡಿದ್ದಾರೆ. ಆದ್ರೆ ಮೊದಲ ಮದುವೆ ವಿಷಯವನ್ನ ನವಜೋಡಿಗಳಾದ ಲೊಕೇಶ ಹಾಗೂ ನಿರ್ಮಲಾ ತಿರಸ್ಕರಿಸಿದ್ದು, ನನಗೆ ಯಾವುದೇ ಮದುವೆ ಆಗಿಲ್ಲಾ. ನಾವು ಯಾವುದೇ ಹಣ, ಬಂಗಾರ ಏನು ತೆಗೆದುಕೊಂಡು ಹೊಗಿಲ್ಲಾ. ಒಡವೆ ಬಂಗಾರವನ್ನ ಯಾರು ತೆಗೆದುಕೊಂಡಿದ್ದಾರೊ ಅವರನ್ನ ಕೇಳಲಿ ನಮಗೆ ಏನು ಬೇಡಾ ನಮ್ಮಷ್ಟಕ್ಕೆ ನಮ್ಮನ್ನ ಬಿಟ್ಟರೇ ಸಾಕು ಉತ್ತಮ ಜೀವನ ಮಾಡ್ತೇವೆ ಅಂತಿದ್ದಾರೆ….
ಇನ್ನು ಯುವತಿ ನಾಪತ್ತೆ ಕುರಿತು ಜನವಾಡ ಠಾಣೆಯಲ್ಲಿ ಯುವತಿ ತಂದೆ ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದಾಗ, ನಿರ್ಮಲಾ ಹಾಗೂ ಲೊಕೇಶನನ್ನ ಠಾಣೆಗೆ ಕರೆಸಿ ವಿಚಾರಿಸಿದಾಗ ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಆದ್ರೆ ಬಳಿಕ ಯುವತಿಯನ್ನ ಮೊದಲೇ ಮದುವೆಯಾಗಿದ್ದಾಗಿ ಹೇಳುತ್ತಿರುವ ನಿತೇಶ ಎಂಬಾತ ಪುನಃ ದೂರು ನೀಡಲು ಮುಂದಾಗಿದ್ದು, ದೂರಿನ ಮೇರೆಗೆ ಮತ್ತೆ ಲೊಕೇಶ ಹಾಗೂ ನಿರ್ಮಲಾಗೆ ಕರೆ ಮಾಡಿ ಠಾಣೆಗೆ ಬರುವಂತೆ ಸುಚನೆ ನೀಡಿದ್ದಾರೆ. ಆದ್ರೆ ಠಾಣೆಗೆ ತೆರಳದೆ ನಿರ್ಮಲಾ ಹಾಗೂ ಲೊಕೇಶ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿ ಮೆಟ್ಡಿಲೇರಿ ರಕ್ಷಣೆ ಕೋರಿದ್ದಾರೆ. ಎಸ್ಪಿ ಚನ್ನಬಸವಣ್ಣ ಲಂಗೋಟಿ ನವಜೋಡಿಗಳನ್ನ ವಿಚಾರಣೆ ನಡೆಸಿದಾಗ ಯುವತಿಗೆ ಮೊದಲೇ ಮದುವೆ ಆಗಿರುವ ಕುರಿತ ಪೊಟೊಗಳನ್ನ ಹಂಚಿಕೊಂಡಿದ್ದಾರೆ. ಪ್ರಕರಣ ಸತ್ಯಾಸತ್ಯತೆ ಕುರಿತು ತನಿಖೆ ಮಾಡಲಾಗುತ್ತಿದ್ದು, ಎರಡು ಕುಟುಂಬಗಳನ್ನ ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ…
ಒಟ್ನಲ್ಲಿ ನವಜೋಡಿಗಳು ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸಬೇಕು ಅನ್ನೊವಾಗಲೇ, ಯುವತಿಯ ಮೊದಲ ಮದುವೆಯ ವಿಚಾರ ಬೆಳಕಿಗೆ ಬಂದಿದೆ…ಅದ್ರೆ ಮದುವೆ ವಿಚಾರವನ್ನ ಯುವತಿ ತಳ್ಳಿ ಹಾಕಿದ್ದು, ಇದೆಲ್ಲಾ ನಮ್ಮ ಕುಟುಂಬಸ್ಥರು ಮಾಡಿದ ಕಿತಾಪತಿ ಎಂದು ವಾದಿಸುತ್ತಿದ್ದಾಳೆ