ಧಾರವಾಡ: ಕೊಳಚೆ ಅಭಿವೃದ್ಧಿ ನಿಗಮದಲ್ಲಿ ತಾಂತ್ರಿಕ ನಿರ್ದೇಶಕರಾಗಿರುವ “ಶ್ರೀ ಮಾರುತಿ ಲಂಬಾಣಿ” ಇಂಜಿನಿಯರ್ ವ್ಯಾಸಂಗ ಮಾಡದ “ಫಣಿರಾಜ್” ಎಂಬ ವ್ಯಕ್ತಿಯಿಂದ 28 ಲಕ್ಷ ಪಡೆದು ಇಂಜಿನಿಯರ್ ಆಗಿ ನೇಮಕ ಮಾಡಿದ ಆರೋಪಕ್ಕೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ ಕೊಳಚೆ ಅಭಿವೃದ್ಧಿ ನಿಗಮದ ಮುಂಬಾಗ ಬೃಹತ್ ಪ್ರತಿಭಟನೆ ಮಾತನಾಡಿದ ರಾಘವೇಂದ್ರ ಎಸ್, ಆರ್ ರಾಜ್ಯ ಅಧ್ಯಕ್ಷರು
ಭಾರತ ದೇಶದಲ್ಲಿ ಆಡಳಿತ ಪಾರದರ್ಶಕತೆ ತರಲು ಸಂವಿಧಾನದ ಮೂಲಕ ರಚನೆ ಯಾಗಿದ್ದು ಆದರೆ ಅದು ನೆಪ ಮಾತ್ರಕ್ಕೆ ಪುಸ್ತಕ, ಕಾಯ್ದೆ, ಕಾನೂನು ಮತ್ತು ಇನ್ನಿತರೆ ದಾಖಲೆಗಳಿಗೆ ಮಾತ್ರ ಸೀಮಿತ ಎಂಬುವ ರೀತಿಯಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇಂಥವರ ಸಾಲಿಗೆ ಸೇರಿದ ಒಬ್ಬ ಸರ್ಕಾರಿ ಅಧಿಕಾರಿ ಧಾರವಾಡದ ಕೊಳಚೆ ಅಭಿವೃದ್ಧಿ ನಿಗಮದಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ‘ಶ್ರೀ ಮಾರುತಿ ಲಂಬಾಣಿ” ಎಂಬ ಭ್ರಷ್ಟ ಲಂಚಬಾಕನು ಇಂಜಿನಿಯರ್ ವ್ಯಾಸಂಗ ಮಾಡದ ”
ಫಣಿರಾಜ್” ಎಂಬ ವ್ಯಕ್ತಿಯಿಂದ 28 ಲಕ್ಷ ಪಡೆದು ಇಂಜಿನಿಯರ್ ಆಗಿ ನೇಮಕ ಮಾಡಿ, 50 ಕೋಟಿಗೂ ಹೆಚ್ಚು ಎಂ. ಬಿ. ಪುಸ್ತಕಗಳನ್ನು ಬರೆಯಿಸಿ. ಅಭಿಯಂತರರ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮಾಡಿದ ಹಗರಣದ ಆರೋಪದ ವಿರುದ್ಧ ತನಿಖೆ ಮಾಡುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ರಾಘವೇಂದ್ರ. ಎಸ್.ಆರ್. ರವರ ನೇತೃತ್ವದಲ್ಲಿ, ನಾಗರೀಕ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣಾ ಪರಿಷತ್ತು, ದಮಿತರ ಸಂರಕ್ಷಣಾ ಸಮಿತಿ ಹಾಗೂ ಇನ್ನಿತರೆ
ಧಾರವಾಡ ಕೊಳಚೆ ಅಭಿವೃದ್ಧಿ ನಿಗಮದ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಇನ್ನು ನಮ್ಮ ರಾಜ್ಯದಲ್ಲಿ ಲಕ್ಷಾಂತರ ಭ್ರಷ್ಟಾಚಾರ ಹಗರಣಗಳು ಸರ್ಕಾರಿ ಕಛೇರಿಗಳಲ್ಲಿ ಇಂಥವರ ವಿರುದ್ಧದ ದೂರುಗಳನ್ನು ಪರಿಗಣಿಸದೆ ನ್ಯಾಯ ಸಮ್ಮತವಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಆದೇಶ ಹೊರಡಿಸದೆ,
ಅವರಿಗೆ ಒತ್ತಾಸೆಯಂತೆ ನಿಂತಿರುವ ಅವರ ಮೇಲಾಧಿಕಾರಿಗಳ ನಡೆ ನಿಜಕ್ಕೂ ಖಂಡನೀಯವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕೊಂಡು ಸಂಪೂರ್ಣ ತನಿಖೆ ಮಾಡಿ ಆರೋಪಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಮನವಿಯನ್ನು ಪರಿಗಣಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೂತುಕೊಳ್ಳಲು ಹಾಗೂ ಉಗ್ರ ಹೋರಾಟ ಮಾಡಿ
(ಡಾ.ರಾಘವೇಂದ್ರ. ಎಸ್.ಆರ್.) ರಾಜ್ಯಾಧ್ಯಕ್ಷರು, ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ
ವರದಿ: ಮಾರುತಿ ಲಮಾಣಿ