ಬೆಂಗಳೂರು: ಸಿಇಓ (CEO) ಸುಚನಾ ಸೇಠ್ ಮಗುವಿನ ಹತ್ಯೆ ಪ್ರಕರಣವನ್ನು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಚನಾ ಸೇಟ್ ರಿಂದ (Suchana Seth) ಕೊಲೆಯಾದ 4-ವರ್ಷದ ಮಗುವಿನ ಅಂತಿಮ ವಿಧಿವಿಧಾನಗಳನ್ನು (final rites) ಪೂರೈಸಿ ರಿಶ್ಚಂದ್ರ ಘಾಟ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೇರವೆರಿಸಿದ ತಂದೆ ವೆಂಕಟರಮಣ
ಮೃತ ಮಗುವಿನ ಅಂತ್ಯಸಂಸ್ಕಾರದ ಬಳಿಕ ವೆಂಕಟರಮಣ ಅವರನ್ನು ಗೋವಾ ಪೊಲೀಸರು (Goa Police) ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅವರ ಬಳಿ ಸುಚನಾ ಹಾಗೂ ಪುತ್ರ ಚಿನ್ಮಯ್ ಬಗ್ಗೆ ಪೊಲೀಸರು ಮಾಹಿತಿ ಪಡೆಯುವ ಸಾಧ್ಯತೆ ಇದೆ. ಮಗುವಿನ ಹತ್ಯೆಗೂ ಮುನ್ನ ವೀಡಿಯೋ ಕಾಲ್ ಮಾಡಿದ್ದ ವೆಂಕಟರಮಣ ಅವರು ಮಗುವಿನೊಂದಿಗೆ ಮಾತಾಡಿದ್ದರು ಎಂದು ತಿಳಿದು ಬಂದಿದೆ.
ಸುಚನಾ ಹಾಗೂ ವೆಂಕಟರಮಣ ವಿಚ್ಛೇದನ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಾರಕ್ಕೊಮ್ಮೆ ತಂದೆ ಬಳಿ ಮಗನ ಭೇಟಿಗೆ ಕೋರ್ಟ್ ಸೂಚಿಸಿತ್ತು. ಕೋರ್ಟ್ ಸೂಚನೆಯಂತೆ ಕಳೆದ ಭಾನುವಾರ ವೀಡಿಯೋ ಕಾಲ್ನಲ್ಲಿ ಮಗನ ಜೊತೆ ವೆಂಕಟರಮಣ ಅವರು ಮಾತಾಡಿದ್ದರು. ಮಗು ಹಾಗೂ ತಂದೆ ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ವೆಂಕಟರಮಣಗೆ ಮಗ ಸಿಗಬಾರದೆಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆಯ ಬಾರಿ ವೀಡಿಯೋ ಕಾಲ್ನಲ್ಲಿ ಮಾತಾಡಿದ್ದೆನು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುವ ಸಾಧ್ಯತೆ ಇದೆ.
ಏನಿದು ಪ್ರಕರಣ?: ಸ್ವಂತ ಮಗುವನ್ನೇ ತಾಯಿಯೊಬ್ಬಳು ಹತ್ಯೆಗೈದು ಸೂಟ್ಕೇಸ್ನಲ್ಲಿ ಶವವಿಟ್ಟುಕೊಂಡು ತೆರಳುತ್ತಿದ್ದ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದರು.
ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ ವಿರುದ್ಧ ಗೋವಾದ ಹೋಟೆಲ್ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದರು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದರು. ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನ ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದರು.
ಆಕೆ ಹೋಟೆಲ್ನಿಂದ ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದರು. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಗೋವಾ ಪೊಲೀಸರು ಹೋಟೆಲ್ ಸಿಬ್ಬಂದಿ ಕರೆಸಿದ್ದ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಆಕೆಯೊಂದಿಗೆ ಮಾತನಾಡಲು ಹೇಳಿದ್ದಾರೆ. ಆಕೆಯ ಮಗನ ಬಗ್ಗೆ ಕೇಳಿದಾಗ ಅವನು ಸ್ನೇಹಿತನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಳು. ಆತನ ವಿಳಾಸವನ್ನೂ ನೀಡಿದ್ದಳು. ಪೊಲೀಸರು ಆ ವಿಳಾಸವನ್ನ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ನಂತರ ಟ್ಯಾಕ್ಸಿ ಡ್ರೈವರ್ಗೆ ಹೈವೆಬಳಿ ಪೊಲೀಸರು ಕಂಡಾಕ್ಷಣ ಟ್ಯಾಕ್ಸಿ ನಿಲ್ಲಿಸುವಂತೆ ತಿಳಿಸಿದ್ದಾರೆ.