ಬೆಂಗಳೂರು:- ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆ 711 ಡಿ.ಎಲ್ ಅಮಾನತು ಮಾಡಲಾಗಿದೆ.
ನಗರದಲ್ಲಿ ಕಳೆದ ವರ್ಷ 2,974 ಡಿ.ಎಲ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಬೆಂಗಳೂರು ನಗರ, ರಾಜ್ಯದ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಡಿ.ಎಲ್ ಅಮಾನತು ಮಾಡುವಂತೆ ಕಳುಹಿಸಲಾಗಿತ್ತು. ಅದರಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಡಿ.ಎಲ್ ಅಮಾನತು ಮಾಡಿದ್ದಾರೆ. ಉಳಿದ, 2,263 ಡಿ.ಎಲ್ಗಳನ್ನು ಅಮಾನತು ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ