ಬೆಂಗಳೂರು:- ಜನವರಿ 22ರಂದು ಅಯೋಧ್ಯ ರಾಮ ಮಂದಿರದಲ್ಲಿ ವಿಜೃಂಭಣೆಯಿಂದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಜನವರಿ 22ರ ದಿನವನ್ನು ಸ್ಮರಣೀಯವಾಗಿಸಲು ಹಲವು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಆ ದಿನವೇ ತಮ್ಮ ಮಕ್ಕಳು ಜನಿಸಬೇಕು ಎಂದು ಗರ್ಭಿಣಿಯರು ಆಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಅನೇಕ ಆಸ್ಪತ್ರೆಯ ವೈದ್ಯರಿಗೆ ಗರ್ಭಿಣಿಯರು ದುಂಬಾಲು ಬಿದ್ದಿರುವುದು ಬೆಳಕಿಗೆ ಬಂದಿದೆ.
ಹೌದು, ಗರ್ಭಿಣಿಯರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿ 22 ರಂದೇ ಡೆಲಿವೆರಿ ಮಾಡಿಸಿಕೊಳ್ಳುವಂತೆ ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಆದ್ರೆ ವೈದ್ಯರು, ಎಲ್ಲರಿಗೂ ಅವತ್ತೆ ಡೆಲಿವರಿ ಮಾಡುವುದಕ್ಕೆ ಕಷ್ಟ ಸಾಧ್ಯ ಎನ್ನುತ್ತಿದ್ದಾರೆ. ಡೆಲಿವರಿ ನಿಗಧಿಯಾದ ದಿನಾಂಕಕ್ಕಿಂತ ಒಂದು ವಾರ ಹಿಂದೆ ಮುಂದೆ ಅಂತರ ಇದ್ರೆ ಮಾತ್ರ ಈ ರೀತಿ ಡೆಲಿವರಿ ಮಾಡಿಸಿಕೊಳ್ಳಬಹುದು. ಅತಂವರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ ಎಂದಿದ್ದಾರೆ ವೈದ್ಯರು.
ಮಂದಿರ ಉದ್ಘಾಟನೆ ದಿನ ಹೆರಿಗೆ ಮಾಡಿಸಿಕೊಳ್ಳಲು ತಾಯಂದಿರ ಬೇಡಿಕೆ ಹೆಚ್ಚಾಗಿದ್ದು, ನಮಗೆ ರಾಮನಂಥಾ ಮಗು ಹುಟ್ಟಲಿ ಎಂದು ಬಯಸಿ ಉತ್ತರ ಪ್ರದೇಶದ ಗರ್ಭಿಣಿಯರು ಸಿಜೇರಿಯನ್ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ