ಬಳ್ಳಾರಿ: ಅನಂತ್ ಕುಮಾರ್ ಹೆಗಡೆ ಅವರು ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರ ಜತೆ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಸಂಡೂರು ತಾಲೂಕಿನ ದೇವರ ಕೊಳ್ಳದ ನಾಗಸಾಧು ಭಾರೀ ಪ್ರಭಾವಿಯಾಗಿದ್ದಾರೆ.
ಗುಡ್ಡದ ಮೇಲಿರೋ ಮರವೊಂದರ ಮೇಲೆ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರು ವಾಸ ಮಾಡುತ್ತಾರೆ. ನಾಗಸಾಧು ಅವರು ಆರು ತಿಂಗಳು ಮಾತನಾಡ್ತಾರೆ ಇನ್ನಾರು ತಿಂಗಳು ಮೌನವೃತದಲ್ಲಿ ರುತ್ತಾರೆ. ಇಲ್ಲಿಗೆ ಬಂದು ಆಶೀರ್ವಾದ ಪಡೆದ್ರೇ ಗೆಲ್ತಾರೆ ಅನ್ನೋ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಮುನ್ನ ಹಲವು ನಾಯಕರು ಬರುತ್ತಾರೆ.