ಬಳ್ಳಾರಿ: ಸಾಂಬಾರ್ ಪದಾರ್ಥಗಳ ಮಾರಾಟ ಮತ್ತು ಖರೀದಿಗಾರರ ಸಮಾವೇಶವನ್ನೂ ಬಳ್ಳಾರಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಸಮಾವೇಶವನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಉದ್ಘಾಟಿಸಿದರು. ದೀಪಾ ಬೆಳಗಿಸುವ ಮುಖೇನ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿದ್ದು, ಜಿಲ್ಲೆಯಲ್ಲಿ ಹೆಚ್ಚಾಗಿ ಮೆಣಸಿಕಾಯಿ ಬೆಳೆಯಲಾಗುತ್ತದೆ.
ಬಳ್ಳಾರಿಯಲ್ಲೇ ಮೆಣಿಸಿನಕಾಯಿ ಮಾರ್ಕೇಟ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಣಸಿನಕಾಯಿ ಮಾರ್ಕೇಟ್ ನಿರ್ಮಾಣ ಮಾಡಲಾಗುತ್ತಿದೆ. ಗಣಿಜಿಲ್ಲೆಯಲದಲಿ ಹೆಚ್ಚಿನ ಒಣ ಮೆಣಸಿಕಾಯಿ ಬೆಳೆಯುತ್ತಿದ್ದು, ಬೆರೆ ಕಡೆ ಮಾರಾಟ ಮಾಡಲು ರೈತರಿಗೆ ತೊಂದರೆಯಾಗ್ತಿದೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರ್ಕೇಟ್ ನಿರ್ಮಾಣ ಮಾಡಲು ಜಿಲ್ಲಾಡಳಿದ ಈಗಾಗಲೇ ಸಿದ್ಧತೆ ನಡೆಸಿದೆ ಎಂದು ಹೇಳಿದರು.