ಬಳ್ಳಾರಿ: ಶ್ರೀರಾಮುಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ದೇವಸ್ಥಾನಗಳ ದರ್ಶನ ಮಾಡೋದ್ರ ಜೊತೆಗೆ, ಸ್ವಾಮೀಜಿಗಳ ಭೇಟಿಯಾಗಿ ಆಶೀರ್ವಾದ ಪಡೆದಿದ್ರು. ಇದರ ಜೊತೆಗೆ ಶ್ರೀರಾಮುಲು ಇದೀಗ ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಯಾಕೆಂದರೆ ಇಲ್ಲಿಗೆ ಬಂದು ಆಶೀರ್ವಾದ ಪಡೆದವರು ಯಾರು ಸೋತಿಲ್ಲ ಎನ್ನುವ ಪ್ರತೀತಿ ಇದೆ. ಇನ್ನೂ ಸಂಡೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದೇವರ ಕೊಳ್ಳದ ನಾಗಸಾಧು ಭಾರಿ ಪ್ರಭಾವಿಯಾಗಿದ್ದಾರೆ. ಗುಡ್ಡದ ಮೇಲಿರೋ ಮರದವೊಂದರ ಮೇಲೆ ವಾಸ ಮಾಡ್ತಿರೋ ನಾಗಸಾಧು.
Bengaluru: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ – ಯುವತಿ ಅಡ್ಡಗಟ್ಟಿ ಯುವಕರ ಪುಂಡಾಟ
ಆರು ತಿಂಗಳು ಮಾತನಾಡ್ತಾರೆ ಇನ್ನಾರು ತಿಂಗಳು ಮೌನವೃತದಲ್ಲಿರುತ್ತಾರೆ. ಭಕ್ತರು ತಮಗೆ ಅರ್ಪಿಸಿದ ಹಣದಿಂದ ಹೊಸಪೇಟೆಯಲ್ಲಿ ಶಾಲೆಯೊಂದನ್ನು ಇವರು ನಡೆಸುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಮಾನ್ಯರಂತೆ ಇರುವ ನಾಗಸಾಧು ಆಶೀರ್ವಾದ ಪಡೆಯಲು ರಾಜಕೀಯ ಮುಖಂಡರು ಹೆಚ್ಚು ಹೆಚ್ಚು ಬರುತ್ತಾರೆ