ಬೆಂಗಳೂರು: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ರೆ ಲೋಕಸಭಾ ಚುನಾವಣೆಗೆ ಅನುಕೂಲ ಆಗಲಿದೆ ಅಂತ ಸುರ್ಜೇವಾಲ (Randeep Surjewala) ಬಳಿ ಹಲವು ಸಚಿವರು ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಸಚಿವರಿಂದ ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಭೆಯಲ್ಲಿ ಹಲವು ಸಚಿವರು ಡಿಸಿಎಂ ಹುದ್ದೆ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಮಂತ್ರಿಗಳನ್ನು ಸುರ್ಜೇವಾಲ ಕರೆದಿದ್ದರು. ಲೋಕಸಭಾ ಚುನಾವಣೆ ಬರುತ್ತಿದೆ. ನೀವು ಹಿರಿಯರು ಇದ್ದೀರಾ ಸಿರಿಯಸ್ ಆಗಿ ತಗೋಬೇಕು ಅಂತ ಚರ್ಚೆ ಮಾಡೋಕೆ ಕರೆದಿದ್ದರು.
ಈ ವೇಳೆ ಕೆಲವರು ಡಿಸಿಎಂ ಮಾಡಿದರೆ ಅನುಕೂಲ ಆಗುತ್ತೆ ಅಂತ ಕೆಲ ಸಚಿವರು ಹೇಳಿದ್ರು. ಆದರೆ ಡಿಸಿಎಂ ಹುದ್ದೆ ವಿಷಯವಾಗಿಯೇ ಸಭೆ ಕರೆದಿರಲಿಲ್ಲ. ಡಿಸಿಎಂ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾವು ಸಲಹೆ ಮಾಡಬಹುದು. ಕೆಲವರು ಸಲಹೆ ಮಾಡಿದ್ದಾರೆ. ಸಲಹೆ ತೆಗೆದುಕೊಳ್ಳೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಹೈಕಮಾಂಡ್ ಸಾಧಕ-ಬಾಧಕ ನೋಡಿ ಡಿಸಿಎಂ ಬಗ್ಗೆ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.