ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ಗಳು ಯಾವುದು ಗೊತ್ತಾ: ಇಲ್ಲಿದೆ ನೋಡಿ!
ಸೈಬರ್ ಕ್ರೈಮ್ಗಳು ಎಂಬುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ಈ ಡಿಜಿಟಲ್ ಜಮಾನದಲ್ಲಿ ಸೈಬರ್ ದಾಳಿಕೋರರು ಅಮಾಯಕನ್ನು ಬಲೆಗೆ ಕೆಡವಲು ನಾನಾ ರೀತಿಯಲ್ಲಿ ಹವಣಿಸುತ್ತಿರುತ್ತಾರೆ. ಜೊತೆಗೆ ಹ್ಯಾಕರ್ಗಳು ಸುಲಭವಾಗಿ ಜನರ ಮಾಹಿತಿಗೆ ಕನ್ನ ಹಾಕಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಮೋಸದ ಜಾಲದಲ್ಲಿ ಸಿಲುಕಿ ನಲುಗಿದವರು ಅದೆಷ್ಟೋ ಮಂದಿ. ಈ ಸೈಬರ್ ಕ್ರಿಮಿನಲ್ಗಳ ಕಾಟಕ್ಕೆ ಸಾಕಷ್ಟು ಮಂದಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂಬುದು ಕೂಡಾ ಸತ್ಯ.
ನಿಮ್ಮ ವೈಯಕ್ತಿಕ, ಸಾಮಾಜಿಕ ಮಾಧ್ಯಮ ಅಥವಾ ಕೆಲಸದ ಖಾತೆಗಳನ್ನು ರಕ್ಷಿಸಲು ಸರಿಯಾದ ಮತ್ತು ಸದೃಢ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಕಡಿಮೆ ಅವಧಿಯಲ್ಲಿಯೇ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಸೈಬರ್ ಅಪರಾಧಿಗಳು ಸುಲಭವಾಗಿ ಹ್ಯಾಕ್ ಮಾಡಬಹುದಾದ ಪಾಸ್ವರ್ಡ್ ಅನ್ನು ಆಯ್ಕೆ ಮಾಡುವುದು ಜನರು ಮಾಡುವ ತಪ್ಪುಗಳಲ್ಲಿ ಒಂದಾಗಿದೆ.
NordPassನ ವರದಿಯು ಭಾರತೀಯರು ಹೆಚ್ಚು ಬಳಸುವ 20 ಪಾಸ್ವರ್ಡ್ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ ಮತ್ತು ಹ್ಯಾಕರ್ಗಳು ಅವುಗಳನ್ನು ಭೇದಿಸಲು ಹೆಚ್ಚು ಸಮಯವೇ ಬೇಕಾಗದು ಎಂದೂ ಹೇಳಿಕೊಂಡಿದೆ. ಆ 20 ಪಾಸ್ವರ್ಡ್ಗಳ ಪಟ್ಟಿ ಇಲ್ಲಿದೆ.
ದುರ್ಬಲ ಪಾಸ್ವರ್ಡ್ಗಳು123456
admin
12345678
12345
password
Pass@123
123456789
Admin@123
India@123
admin@123
Pass@1234
1234567890
Abcd@1234
Welcome@123
Abcd@123
admin123
administrator
Password@123
Password
UNKNOWN