ಲೈಫ್ ಸರ್ಟಿಫಿಕೇಟ್ ಅಥವಾ ಜೀವ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಕಾಶ ಇದೆ. ಇವತ್ತು ನವೆಂಬರ್ 28 ಆಗಿದ್ದು, ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರದ ಎಲ್ಲಾ ಉದ್ಯೋಗಿಗಳೂ ಕೂಡ ಲೈಫ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ ಇಲ್ಲಿದೆ ನೋಡಿ!
ಫಲಾನುಭವಿಗಳು ಜೀವಂತವಾಗಿದ್ದಾರಾ ಎಂದು ಖಾತ್ರಿಪಡಿಸಿಕೊಳ್ಳಲು ಲೈಫ್ ಸರ್ಟಿಫಿಕೇಟ್ ಅನ್ನು ಪಡೆಯಲಾಗುತ್ತದೆ. ಸಾಕಷ್ಟು ಬಾರಿ ಪಿಂಚಣಿದಾರರು ಸಾವನ್ನಪ್ಪಿ, ಅವರ ಖಾತೆಗೆ ಪಿಂಚಣಿ ಪ್ರತೀ ತಿಂಗಳೂ ಜಮೆ ಆಗುತ್ತಲೇ ಇರುತ್ತಿತ್ತು. ಇದನ್ನು ತಪ್ಪಿಸಲು ಪ್ರತೀ ವರ್ಷ ಜೀವನ್ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯ ಮಾಡಲಾಗಿದೆ.
ನವೆಂಬರ್ 30ರೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಹಾಗಂತ ಪಿಂಚಣಿ ಖಾಯಂ ಆಗಿ ನಿಂತುಹೋಗುವುದಿಲ್ಲ. ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳ್ಳುತ್ತದೆ. ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್ ಕೊಟ್ಟರೂ ಪಿಂಚಣಿ ಮತ್ತೆ ಸಕ್ರಿಯಗೊಳ್ಳುತ್ತದೆ. ಅದರ ಮುಂದಿನ ತಿಂಗಳಲ್ಲಿ ಬಾಕಿ ಸೇರಿಸಿ ಪಿಂಚಣಿ ಬರುತ್ತದೆ.
ಲೈಫ್ ಸರ್ಟಿಫಿಕೇಟ್ ಹೇಗೆ ಸಲ್ಲಿಸುವುದು?
ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ) ಅಥವಾ ಪಿಂಚಣಿ ವಿತರಣಾ ಸಂಸ್ಥೆಗಳ ಬಳಿ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಇಲ್ಲಿ ಪಿಡಿಎ ಎಂಬುದು ನೀವು ಪಿಂಚಣಿ ಹಣ ಪಡೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಆಗಿರುತ್ತದೆ. ಯಾವ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಬರುತ್ತದೆ ಆ ಬ್ಯಾಂಕ್ಗೆ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು.