ಮಂಡ್ಯ :- ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಮೇರೆಗೆ ಮಂಗಳವಾರ ಬೆಳಿಗ್ಗೆ ಬಿಬಿಎಂಪಿ ಪಾಲಿಕೆ ಅಧಿಕಾರಿ ಮಂಜು ಎಂಬುವವರ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮಂಜು ಎಂಬುವವರ ಸಂಬಂಧಿ, ಹಲಗೂರು ಗ್ರಾ.ಪಂ ಸದಸ್ಯ ಸುರೇಂದ್ರ ಎಂಬುವವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದ ಜೆಪಿಎಂ ಬಡಾವಣೆಯ ಸುರೇಂದ್ರ ಅವರ ಮನೆ ಸ್ವಗ್ರಾಮ ಗುಂಡಾಪುರದ ಮನೆ ಹಾಗೂ ಮದ್ದೂರು ತಾಲೂಕಿನ ಎಸ್.ಐ.ಹೊನ್ನಲಗೆರೆಯ ತಾತನ ಮನೆ, ಅಗಸನಪುರದ ತೋಟದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವರದಿ : ಗಿರೀಶ್ ರಾಜ್, ಮಂಡ್ಯ