ನೆಲಮಂಗಲ: ಪರಿಚಿತ ಮಹಿಳೆಯೊಬ್ಬರು ಕುಡಿದು ರಸ್ತೆಯ ಮಧ್ಯದಲ್ಲಿ ಮಲಗಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿದ ಮಾನವೀಯತೆ ಮೆರೆದಿದ್ದಾರೆ.
ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಉರುಳಾಡುತ್ತಿದ್ದ. ಸಲ್ಪ ಯಾಮಾರಿದ್ರು ವಾಹನಗಳ ಚಕ್ರಕ್ಕೆ ಸಿಲುಕುತಿದ್ದ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದ ಘಟನೆ ಜರುಗಿದೆ. ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡದೆ ಸಾರ್ವಜನಿಕ ಯರು ತೆರಳುತ್ತಿದ್ದರು. ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆ ಮಾನವೀಯತೆಯಿಂದ ಸ್ಕೂಟರ್ ನಿಲ್ಲಿಸಿ ವ್ಯಕ್ತಿಯನ್ನ ಪಾರು ಮಾಡಿದ್ದಾರೆ.
ಸಿಸಿಟಿವಿ ಹಾಗೂ ಸ್ಥಳೀಯ ವ್ಯಕ್ತಿಯ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ. ನೆರವು ಮಾಡಿದ ಅಪರಿಚಿತ ಮಹಿಳೆ, ಆ ವ್ಯಕ್ತಿ ಕೂಡ ಅಪರಿಚಿತ ಎನ್ನಲಾಗಿದ್ದು, ಮಾನವೀಯತೆಗೆ ಸಾಕ್ಷಿಯಾದ ಮಹಿಳೆಗೆ ಸಲಾಂ ಹೇಳಬಹುದಾಗಿದೆ.