ಬೆಂಗಳೂರು:- ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ಜರುಗಿದೆ.
ಯುವಕರ ಭಯಕ್ಕೆ ಬೈಕ್ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ.
ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಯುವಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಜೋರಾಗಿ ಓಡಿಸಿದ್ದಾಳೆ. ನಂತರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿಡಿಗೇಡಿಗಳು, ಕಾರನ್ನು ಯುವಕರು ಅಡ್ಡಗಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಘಟನೆ ಕಂಡುಬಂದಿದೆ.