ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿಯಲ್ಲಿ ಶ್ರೀ ದೇವಲ ದೇಸಾಯಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಹಳಿಂಗಳಿ ಕಮರಿಮಠದ ಪ. ಪೂ ಶ್ರೀ ಶಿವಾನಂದ ಮಹಾಸ್ವಾಮಿಗಳವರಿಂದ ಉದ್ಘಾಟನಾ ಸಮಾರಂಭ ನಡೆಯಿತು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಮಧ್ಯದಲ್ಲಿ ಶ್ರೀ ದೇವಲ ದೇಸಾಯಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತವು ಕಾರ್ಯನಿರ್ವಾಹನೆ ಮಾಡಲಿ. ಜನಸಾಮಾನ್ಯರ ಸಂಕಷ್ಟಕ್ಕೆ ಆಶಾಕಿರಣವಾಗಿ ಬಡತನ ನಿರ್ಮೂಲನೆಗೆ ಸಹಕಾರಿ ಕ್ಷೇತ್ರ ಪ್ರಾಮುಖ್ಯತೆ ಪಡೆದುಕೊಳ್ಳಬೇಕು. ಇದರ ಅಡಿಯಲ್ಲಿ ರೈತರ ಸಂಕಷ್ಟಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸಲ್ಲಿ, ಸಾರ್ವಜನಿಕ ಸೇವಾ ಕೇಂದ್ರವಾಗಿ ಜನರೊಂದಿಗೆ ಬೆರೆತು ಅಭಿವೃದ್ಧಿ ಹೊಂದಲ್ಲಿ, ಶ್ರೀಮಂತಿಕೆ-ಬಡತನದ ಅಂತರ ನೀಗಿಸಲು ಸಹಕಾರಿ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ.
ಬಡತನ, ಅನಕ್ಷರತೆ, ದಾರಿದ್ರ್ಯ ನಿರ್ಮೂಲನೆಯೊಂದಿಗೆ ನಿಜವಾದ ಜನಸೇವೆಗೆ ಸಹಕಾರಿ ವಿಭಾಗ ಮಹತ್ವದ್ದಾಗಿದೆ. ಸಹಕಾರಿ ಕ್ಷೇತ್ರವು ಎಲ್ಲರನ್ನೂ ಒಗ್ಗೂಡಿಸಿ, ಸಮಾನತೆಯೊಂದಿಗೆ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ದೇವಲ ಸರಕಾರ ದೇಸಾಯಿ.
ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ.
ಕಿರಣಕುಮಾರ ದೇಸಾಯಿ. ನ ಮಲ್ಲಿಕಾರ್ಜುನ ಬಾಣಕಾರ. ಪ್ರಕಾಶ ದೇಸಾಯಿ. ಉದಯಕುಮಾರ ದೇಸಾಯಿ. ಯಾಕೂಬ್ ಅಲಾಸ. ಶೀತಲ್ ನಂದೆಪ್ಪನವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ