ಪೀಣ್ಯ ದಾಸರಹಳ್ಳಿ: ,ಹಾವನೂರು ಬಡಾವಣೆಯ ಸೌಂದರ್ಯ ಪಿಯು ಕಾಲೇಜ್ ಆವರಣದಲ್ಲಿ ಜೀವ ಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಚಳಿಗಾಲದ ಪ್ರಯುಕ್ತ ಬಡವರಿಗೆ ಕಂಬಳಿ ವಿತರಿಸಲಾಯಿತು.
ಬಳಿಕ ಟ್ರಸ್ಟ್ ಅಧ್ಯಕ್ಷ ಜೀವನ್ ಕಿಶೋರ್ ಮಾತನಾಡಿ’ ಪ್ರತಿ ವರ್ಷ ಚಳಿಗಾಲದಲ್ಲಿ ಎಂಟನೇ ಮೈಲಿಯಿಂದ ಮೆಜೆಸ್ಟಿಕ್, ಮಾರ್ಕೆಟ್, ಎಲೆಕ್ಟ್ರಾನಿಕ್ ಸಿಟಿ ವರೆಗೂ ರಾತ್ರಿ ವೇಳೆ ನಿರಾಶ್ರಿತರು, ಅನಾಥರಿಗೆ ರಸ್ತೆ ಬದಿ ಮಲಗಿದವರಿಗೆ ಊಟ, ನೀರು, ಕಂಬಳಿ ವಿತರಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ಕಡೆ ಹುಡುಕಿದರೂ 10 ರಿಂದ 15 ಜನ ಮಾತ್ರ ನಿರಾಶ್ರಿತರು ಸಿಗುತ್ತಾರೆ. ಈಗ ಅವರೆಲ್ಲ ಅನಾಥಾಶ್ರಮಗಳಿಗೆ ಸೇರಿದ್ದಾರೆ.ಅದಕ್ಕಾಗಿ ಈ ಕ್ಷೇತ್ರದ ಬಡವರನ್ನು ಗುರುತಿಸಿ ಅವರಿಗೆ ಕಂಬಳಿ ವಿತರಿಸುತಿದ್ದೇವೆ’ ಎಂದು ತಿಳಿಸಿದರು.
ಭೂಮಿಕಾ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರಾಜೇಂದ್ರ ಕೊಣ್ಣೂರ, ಮಾತನಾಡಿ’ ಟ್ರಸ್ಟ್ ನ ಎಲ್ಲಾ ಯುವಕರು ವೃತ್ತಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು ತಮಗೆ ಬರುವ ಸಂಬಳದಲ್ಲಿ ಬಡವರ ಏಳಿಗೆಗಾಗಿ ವಿನಿಯೋಗಿಸುತ್ತಿರುವುದು ಒಳ್ಳೆಯ ಕಾರ್ಯ’ ಎಂದು ಶ್ಲಾಘನೆ ಮಾಡಿದರು.