ಹುಬ್ಬಳ್ಳಿ: ರಾಜ್ಯ ಸರ್ಕಾರ ಐಸಿಸ್ ಹಾಗೆ ಆಡಳಿತ ಮಾಡ್ತಿದೆ ಅನ್ನೋ ಆರೋಪಕ್ಕೆ ಆಕ್ರೋಶ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕೊವಿಡ್ ಕಾಲದಲ್ಲಿ ಹಿಂದೂಗಳ ಶವ ಸಂಸ್ಕಾರ ಮಾಡಿದ್ದು ಮುಸ್ಲೀಮರು ಆಗ ಹಿಂದೂವಾದಿಗಳು ಎಲ್ಲಿದ್ದರು? ಅರ್ಧಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ಮುಸ್ಲೀಮರು, ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು ಮುಖ್ಯಮಂತ್ರಿ
ಸಿದ್ದರಾಮಯ್ಯರಂತ ಶ್ರೇಷ್ಠ ಸಿಎಮ್ ಬಗ್ಗೆ ಅವಹೇಳನ ಮಾಡ್ತಾರೆ,
ಅದಕ್ಕೇ ಕೇಸ್ ಮಾಡಿದ್ದೀವಿಐಸಿಸ್ ಸ್ಟೇಟ್ ಅಂತಾರೆ, ಇವರಿಗೆ ನಾಚಿಕೆ ಆಗಬೇಕುಹಿಂದೂ ಮುಸ್ಲೀಂ ಜಗಳ ಹಚ್ಚೋದು ಬಿಜೆಪಿ ಕೆಲಸ ಆಗಿ ಲೋಕಸಭೆ ಚುನಾವಣೆ ಬಂದಿದೆ ಹಿಂದೂ ಮುಸ್ಲೀಂ ಅಂತಾ ಇಶ್ಯೂ ಮಾಡ್ತಾರೆಪಾಕಿಸ್ತಾನಕ್ಕೆ ಬಿರ್ಯಾನಿ ತಿನ್ನಲು ಹೋದವರು ಮೋದಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಮನೆಗೆ ಬಿರ್ಯಾನಿ ತಿನ್ನಲು ಮೋದಿ ಹೋಗಿದ್ರು, ಅದಕ್ಕೇನು ಹೇಳ್ತಾರೆ ಎಂದ ಅವರು ಶ್ರೀಕಾಂತ ಪೂಜಾರಿ ಮಹಾನ್ ವ್ಯಕ್ತೀನಾ? ಆತನ ಪರ ಹೋರಾಡ್ತಾರೆ ಎಂದರು.