ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಮೇಟ್ರೋ ಅತ್ಯಂತ ಪ್ರಮುಖ ಪಾತ್ರವಹಿಸಿದೆ, ಈಗಾಗಲೇ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಇದೀಗ ಮೂರನೇ ಹಂತದಲ್ಲಿ ಆರ್.ವಿ.ರಸ್ತೆಯಿಂದ, ಸಿಲ್ಕ್ ಬೋರ್ಡ್ ಮುಖಾಂತರ ಹೊಸೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಹಳದಿ ಲೇನ್ ಇನ್ನೇನು ಮೂರ್ನಾಲಕ್ಕು ತಿಂಗಳಲ್ಲಿ ಸಂಚಾರ ಆರಂಭಿಸಲಿದೆ ಇದೀಗ BMRCL ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದೆ,
ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ದುರ್ಮರಣ: ಮೃತರ ಕುಟುಂಬಕ್ಕೆ ಪರಿಹಾರ ಸೂಚಿಸಿದ ಸಿಎಂ!
ಹೊಸೂರು ರಸ್ತೆಯಲ್ಲಿನ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಎಂದು ಹೆಸರನ್ನ ಹಾಕುತ್ತಿದ್ದಂತೆ ಸ್ಥಳೀಯರು ಸಿಡಿದೆದ್ದು BMRCL ವಿರುದ್ದ ರಸ್ತೆಗಿಳಿದು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು, ಹೆಬ್ಬಗೋಡಿ ದ್ವಾರ ಬಾಗಿಲಿನಿಂದ ನೂರಾರು ಸಂಖ್ಯೆಯಲ್ಲಿನ ಸ್ಥಳೀಯ ನಾಗರೀಕರು ಮೆರವಣಿಗೆ ಮೂಲಕ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಬಳಿ ಜಮಾವಣೆಗೊಂಡು BMRCL ಮತ್ತು ಬಯೋಕಾನ್ ವಿರುದ್ದ ಘೋಷಣೆಗಳನ್ನಾಕಿ ಪ್ರತಿಭಟಿಸಿದರು.
ಹೆಬ್ಬಗೋಡಿ ಆನೇಕಲ್ ತಾಲ್ಲೂಕಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ನೂರಾರು ವರ್ಷಗಳ ಇತಿಹಾಸವಿರುವ ಗ್ರಾಮದ ಹೆಸರನ್ನ ಅಳಿಸಿ ಹಾಕಲು ಬಯೋಕಾನ್ ಹೆಸರು ಮುಂದೆ ಹಾಕುತ್ತಿದ್ದಾರೆಂದು ಆರೋಪಿಸಿದರು, ನಮಗೆ ಬಯೋಕಾನ್ ಹೆಸರು ಬೇಡ ಕೇವಲ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಎಂದೇ ಬರಬೇಕೆಂದು BMRCLಗೆ ಆಗ್ರಹಿಸಿದರು, ಬಯೋಕಾನ್ ಹೆಸರು ತೆಗೆಯದಿದ್ದಲ್ಲಿ ಹೆಬ್ಬಗೋಡಿಯಲ್ಲೇ ನಿರ್ಮಾಣವಾಗುತ್ತಿರುವ ಮೇಟ್ರೋ ಸರ್ವಿಸ್ ಸ್ಟೇಷನ್ ಕಾರ್ಯನಿರ್ವಹಿಸಲು ಅವಕಾಶ ಕೊಡೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು..