ನವದೆಹಲಿ: ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಯುವಕನ ಮರ್ಮಾಂಗವನ್ನು ಕತ್ತರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೆಹಲಿಯ ಹೊರವಲಯದ ಮಂಗಳಪುರಿಯಲ್ಲಿ 22 ವರ್ಷದ ಯುವತಿ ಈ ಕೃತ್ಯವನ್ನು ಎಸಗಿದ್ದಾಳೆ. ಕೃತ್ಯ ಎಸಗಿದ ಬಳಿಕ ಯುವತಿ ತನ್ನ ಕುಟುಂಬದ ಸದಸ್ಯರ ಜೊತೆ ಪರಾರಿಯಾಗಿದ್ದಾಳೆ.
35 ವರ್ಷದ ಸಂತ್ರಸ್ತ ಯುವಕನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದರೆ ಮರ್ಮಾಂಗವನ್ನು ಜೋಡಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಬೀದಿ ವ್ಯಾಪಾರಿಯಾಗಿರುವ ಯುವಕನನ್ನು ಯುವತಿ ತನ್ನ ಮನೆಗೆ ಕರೆದಿದ್ದಾಳೆ. ಮನೆಗೆ ಬಂದ ಯುವಕನ ಜೊತೆ ಮದುವೆಯಾಗುವಂತೆ ಒತ್ತಡ ಹೇರಿದ್ದಾಳೆ. ಮದುವೆಯನ್ನು ನಿರಾಕರಿಸಿದ್ದಕ್ಕೆ ಯುವತಿ ಯುವಕನ್ನು ಬಾತ್ ರೂಮ್ನಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಬಲವಂತವಾಗಿ ಸೆಕ್ಸ್ ಮಾಡುವಂತೆ ಒತ್ತಡ ಹಾಕಿದ್ದಾಳೆ.
ತನ್ನ ಬೇಡಿಕೆಯನ್ನು ಯುವಕ ತಿರಸ್ಕರಿಸಿದ್ದಕ್ಕೆ ಆಡುಗೆ ಕೋಣೆಗೆ ಹೋಗಿ ಯುವತಿ ಹರಿತವಾದ ಚೂರಿಯನ್ನು ತಂದು, ನನ್ನ ಜೊತೆ ಸೆಕ್ಸ್ ಮಾಡದೇ ಇದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಬಳಿಕ ಅದೇ ಚೂರಿಯಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಈ ಸಂದರ್ಭದಲ್ಲಿ ಯುವತಿಯ ಸಹೋದರ ಮತ್ತು ಆತನ ಪತ್ನಿಯು ಮನೆಯಲ್ಲಿದ್ದರು. ಅವರು ಪ್ರಿಯತಮನಿಗೆ ಪಾಠ ಕಲಿಸುವಂತೆ ಆಕೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃತ್ಯ ನಡೆದ ಬಳಿಕ ಯುವಕ ಚೀರಾಡಿದ್ದಾನೆ. ಸಹಾಯಕ್ಕಾಗಿ ಚೀರಾಡುತ್ತಿರುವುದನ್ನು ಕೇಳಿಸಿದ ಸ್ಥಳೀಯರು ಯುವತಿಯ ಮನೆಯನ್ನು ಪ್ರವೇಶಿಸಿದ್ದಾರೆ. ಯುವಕನನ್ನು ನೋಡಿದ ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕ ಬಿದ್ದಿದ್ದ.
ಐಪಿಸಿ ಸೆಕ್ಷನ್ 326(ಮಾರಣಾಂತಿಕ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಬಂಧನಕ್ಕೆ ಬಲೆ ಪೊಲೀಸರು ಬಲೆ ಬೀಸಿದ್ದಾರೆ. ಕೆಲ ವರ್ಷದ ಹಿಂದೆ ಯುವಕ ಯುವತಿ ಭೇಟಿಯಾಗಿ ಸ್ನೇಹಿತರಾಗಿದ್ದರು. ಯುವತಿ ಯುವಕನನ್ನು ಇಷ್ಟಪಟ್ಟಿದ್ದರೆ, ಯುವಕನ ಪೋಷಕರು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಹೀಗಾಗಿ ಈಕೆ ಯುವಕನ ಜೊತೆ ನನ್ನನ್ನು ಮದುವೆಯಾಗು ಎಂದು ದುಂಬಾಲು ಬೀಳುತ್ತಿದ್ದಳು.