ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಚೀನಾ ಮೂಲದ ಮೊಬೈಲ್ ಕಂಪನಿ Xiaomi ವಿನೂತನ, ವಿಶಿಷ್ಟ ಫೀಚರ್ಗಳನ್ನು ಹೊಂದಿರುವ ಮೊಬೈಲ್ಗಳನ್ನು ಪರಿಚಯಿಸುತ್ತಲೇ ಬಂದಿದ್ದು, ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡ್ತಿದೆ.
ಇದೀಗ ಈ ಸಂಸ್ಥೆ Xiaomi-Mi9 ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅತ್ತುತ್ತಮ ಕ್ಯಾಮರಾ, ಬ್ಯಾಟರಿ ಬ್ಯಾಕ್ಅಪ್, ಆಕರ್ಷಕ ಡಿಸ್ಪ್ಲೆಯನ್ನು ಹೊಂದಿದೆ. 6.13 ಇಂಚು ಡಿಸ್ಪ್ಲೇ ಹೊಂದಿರು ಈ ಮೊಬೈಲ್ ಸಖತ್ ಸ್ಟೈಲಿಶ್ ಆಗಿದೆ. ಕ್ಯಾಮರಾ ಮತ್ತು ಬ್ಯಾಟರಿ ವಿಚಾರಕ್ಕೆ ಬಂದ್ರೆ ಈ ಮೊಬೈಲ್ ಟ್ರಿಪಲ್ ರಿಯರ್ ಸೆನ್ಸಾರ್ ಹೊಂದಿದ್ದು ,48MP+12MP+16MP ಲೆನ್ಸಸ್ ಹೊಂದಿದೆ. ಹಾಗೂ 20MP ಫ್ರಂಟ್ ಕ್ಯಾಮರವನ್ನು ಇದೆ.́
ಉತ್ತಮವಾದ ಬ್ಯಾಟರಿ ಬ್ಯಾಕ್ಅಪ್ ಹೊಂದಿದ್ದು 3,300mAh ಇದೆ. ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್ ಮಾಡ್ಬಹುದು. ಮೊಬೈಲ್ನಲ್ಲಿ 128GB ಇನ್ಬಿಲ್ಟ್ ಸ್ಟೋರೆಜ್ ಇದೆ. 6GB RAM ಹೊಂದಿದೆ. ಡೀಪ್ ಗ್ರೇ, ಕಡುನೀಲಿ ಕಲರ್ಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಮೊಬೈಲ್ಗೆ ಆರಂಭಿಕ ದರ 31,790 ರೂ.