ಅಯೋಧ್ಯೆ: ರಾಮ ಮಂದಿರದ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ನಾಗ್ಪುರದ ಬಾಣಸಿಗ ವಿಷ್ಣು ಮನೋಹರ್ ಅವರು ಅಯೋಧ್ಯೆಯಲ್ಲಿ 7,000 ಕೆ.ಜಿ ತೂಕದ ‘ರಾಮ ಹಲ್ವಾ’ ತಯಾರಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಾಣಸಿಗ ವಿಷ್ಣು ಮನೋಹರ್ ಮಾತನಾಡಿ, ರಾಮ ಹಲ್ವಾ (Rama Halwa) ತಯಾರು ಮಾಡಲು 12 ಸಾವಿರ ಲೀಟರ್ ಸಾಮರ್ಥ್ಯದ ವಿಶೇಷ ಕಡಾಯಿ (ಕಡಾಯಿ) ತಯಾರಿಸಿದ್ದು,
ಅದರಲ್ಲಿ ರಾಮ ಹಲ್ವಾ ತಯಾರು ಮಾಡಲಿದ್ದಾರೆ. 900 ಕೆ.ಜಿ ರವೆ, 1000 ಕೆ.ಜಿ ತುಪ್ಪ, 1000 ಕೆ.ಜಿ ಸಕ್ಕರೆ, 2000 ಲೀಟರ್ ಹಾಲು, 2,500 ಲೀಟರ್ ನೀರು, 300 ಕೆ.ಜಿ ಡ್ರೈ ಫ್ರೂಟ್ಸ್ ಮತ್ತು 75 ಕೆ.ಜಿ ಏಲಕ್ಕಿ ಪುಡಿಯನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ರಾಮಹಲ್ವಾ ತಯಾರು ಮಾಡುವ ಕಡಾಯಿ ಬಗ್ಗೆ ಹೇಳುವುದಾದರೆ ಇದರ ತೂಕ 1, 300 ರಿಂದ 1400 ಕೆ.ಜಿ. ಇದ್ದು,
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಇದನ್ನು ಉಕ್ಕಿನಿಂದ ತಯಾರಿಸಲಾಗಿದೆ. ಹಲ್ವಾ ಮಾಡುವಾಗ ಅದು ಸುಡದಂತೆ ಮಧ್ಯಭಾಗವನ್ನು ಕಬ್ಬಿಣದಿಂದ ಮಾಡಲಾಗಿದೆ. ಇದರ ಗಾತ್ರ 10 ಅಡಿ. ಇದು 12,000 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 7,000 ಕೆಜಿ ಹಲ್ವಾ ತಯಾರಿಸಬಹುದು. ಅದನ್ನು ಎತ್ತಲು ಕ್ರೇನ್ ಅಗತ್ಯವಿದೆ. 10 ರಿಂದ 12 ಕೆಜಿ ತೂಕದ ಸ್ಪಾಟುಲಾದಲ್ಲಿ ರಂಧ್ರಗಳಿರುವುದರಿಂದ ಅಡುಗೆ ಮಾಡಲು ಸುಲಭವಾಗಿದೆ ಎಂದರು.
ರಾಮಲಲ್ಲಾಗೆ (Rama Lalla) ಅರ್ಪಿಸಿದ ನಂತರ ಈ ಪ್ರಸಾದವನ್ನು ಸುಮಾರು ಒಂದೂವರೆ ಲಕ್ಷ ಜನರಿಗೆ ವಿತರಿಸಲಾಗುತ್ತದೆ. ಇದಕ್ಕೆ ನಾವು ʼಕರಸೇವೆಯಿಂದ ಪಾಕಸೇವೆʼ ಎಂದು ಹೆಸರಿಸಿದ್ದೇವೆ. ಇದರಲ್ಲಿ ನಮ್ಮ ಭಾವನೆಗಳಿವೆ. ಚಳುವಳಿಯ ಕಾಲದ ಅಯೋಧ್ಯೆಗೂ ಇಂದಿನ ಅಯೋಧ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಇಂದು ಅಯೋಧ್ಯೆಯಲ್ಲಿ ವಿಪರೀತ ಸಂಭ್ರಮವಿದೆ ಎಂದು ಅವರು ಹೇಳಿದರು.